ಕರ್ನಾಟಕ ರಾಜ್ಯ ವಕೀಲರ ಪರಿಷತ್: ಕಲ್ಯಾಣ ನಿಧಿ ವಾರ್ಷಿಕ ಚಂದಾ ದಂಡ ರಹಿತ ಪಾವತಿಗೆ ಕೊನೆ ದಿನ
ಕರ್ನಾಟಕ ರಾಜ್ಯ ವಕೀಲರ ಪರಿಷತ್: ಕಲ್ಯಾಣ ನಿಧಿ ವಾರ್ಷಿಕ ಚಂದಾ ದಂಡ ರಹಿತ ಪಾವತಿಗೆ ಕೊನೆ ದಿನ
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಕಲ್ಯಾಣ ನಿಧಿಗೆ ವಕೀಲರ ವಾರ್ಷಿಕ ಚಂದಾ ಪಾವತಿಗೆ ಕೊನೆ ದಿನ 10-01-2025 ಆಗಿರುತ್ತದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿದ ವಕೀಲರು ವಕೀಲರ ಪರಿಷತ್ತಿನ ಕಲ್ಯಾಣ ನಿಧಿಗೆ ತಮ್ಮ ವಾರ್ಷಿಕ ವಂತಿಗೆ ನೀಡಲು ಡಿಸೆಂಬರ್ 31 ಕೊನೆಯ ದಿನವಾಗಿತ್ತು. ಈ ಅಂತಿಮ ಗಡುವನ್ನು ಜನವರಿ 10, 2025ರಂದು ಮುಂದೂಡಿಕೆ ಮಾಡಲಾಗಿತ್ತು.
ಕೆಎಸ್‌ಬಿಸಿ ಅಧ್ಯಕ್ಷರ ನಿರ್ದೇಶನದಂತೆ ಪ್ರಭಾರ ಕಾರ್ಯದರ್ಶಿ ಸುನೀತಾ ಕೆ.ಎನ್. ಅವರು ಸುತ್ತೋಲೆ ಪ್ರಕಟಿಸಿದ್ದರು. ವಕೀಲರ ಪರಿಷತ್ತಿನ ಕಲ್ಯಾಣ ನಿಧಿಗೆ ತಮ್ಮ ವಾರ್ಷಿಕ ವಂತಿಗೆ ನೀಡಲು ಜನವರಿ 10ರ ವರೆಗೆ ಪಾವತಿಸಬಹುದು ಎಂದು ಈ ಸುತ್ತೋಲೆಯಲ್ಲಿ ಹೇಳಲಾಗಿದೆ.
ಜನವರಿ 10ರ ವರೆಗೆ ಮಾಡುವ ಪಾವತಿಗೆ ಯಾವುದೇ ದಂಡ ಇರುವುದಿಲ್ಲ ಎಂದು ಪರಿಷತ್ ಸ್ಪಷ್ಟಪಡಿಸಿದೆ.
11-01-2025ರಿಂದ ವಾರ್ಷಿಕ ವಂತಿಗೆ ಪಾವತಿಸುವ ವಕೀಲರಿಗೆ ಮಾಹೆಯಾನ ರೂ. 100ರ ದಂಡ ಪಾವತಿಸಬೇಕಾಗುತ್ತದೆ. ಇದಕ್ಕೆ 30 ಜೂನ್ ವರೆಗೆ ಮಾತ್ರ ಅವಕಾಶ ನೀಡಲಾಗಿದೆ.
23-11-2024ರಿಂದ 26-12-2024ರ ಅವಧಿಯಲ್ಲಿ ವಾರ್ಷಿಕ ವಂತಿಗೆ ಪಾವತಿಸಿದವರ ಮಾಹಿತಿಯನ್ನು 10-01-2025ರ ನಂತರ ವೆಬ್‌ಸೈಟ್‌ನಲ್ಲಿ ಪ್ರತಿಫಲಿಸಲಾಗುವುದು.
ಆನ್‌ಲೈನ್ ಮೂಲಕ ಅಥವಾ ವಕೀಲರು ಪ್ರತಿನಿಧಿಸುತ್ತಿರುವ ಬಾರ್ ಅಸೋಸಿಯೇಷನ್ ಮೂಲಕ ವಕೀಲರು ತಮ್ಮ ವಾರ್ಷಿಕ ವಂತಿಗೆಯನ್ನು ಪಾವತಿಸಬಹುದಾಗಿದೆ.
ಪಾವತಿಯ ನಂತರ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿಂದ ಅಧಿಕೃತ ರಶೀದಿ ಪಡೆದುಕೊಳ್ಳಲು ಸೂಚಿಸಲಾಗಿದೆ.
ನೋಂದಾವಣೆಗೊಂಡು 15 ವರ್ಷ ವೃತ್ತಿ ಪೂರೈಸಿದವರು ₹ 2,000/- ವಾರ್ಷಿಕ ವಂತಿಗೆ ಕಟ್ಟಬೇಕಾಗಿದೆ.
ನೋಂದಾವಣೆಗೊಂಡು 15 ವರ್ಷ ವೃತ್ತಿ ಪೂರೈಸದವರು ₹ 1,000/- ವಾರ್ಷಿಕ ವಂತಿಗೆ ಕಟ್ಟಬೇಕಾಗಿದೆ.
ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನಲ್ಲಿ welfare Fund ವರ್ಷದ ವಂತಿಗೆ ಕಟ್ಟಲು ಕೊನೆಯ ದಿನಾಂಕ 10-01-2025.