ಅತ್ಯಾಚಾರ, ಕೊಲೆ ಬೆದರಿಕೆ ಆರೋಪಿ ಮತಾಂತರ: ಪ್ರಕರಣ ಸುಖಾಂತ್ಯ..!
ಅತ್ಯಾಚಾರ, ಕೊಲೆ ಬೆದರಿಕೆ ಆರೋಪಿ ಮತಾಂತರ: ಪ್ರಕರಣ ಸುಖಾಂತ್ಯ..!
10 ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿಗಾಗಿ ವ್ಯಕ್ತಿಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರ ಗೊಂಡಿರುವ ಪ್ರಕರಣ ಉತ್ತರ ಪ್ರದೇಶದ ಬಸ್ತಿ ಗ್ರಾಮದಲ್ಲಿ ನಡೆದಿದೆ.
ಕೋತವಾಲಿ ಠಾಣೆಯ ವ್ಯಾಪ್ತಿಯ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ 34 ವರ್ಷದ ಮುಸ್ಲಿಂ ಯುವಕ ಸದ್ದಾಮ್ ಹುಸೇನ್ ಎಂಬಾತ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರು ತಮ್ಮ ಹೆಸರನ್ನು ಸದ್ದಾಂ ಹುಸೇನ್ ಎಂಬುದಕ್ಕೆ ಬದಲಾಗಿ ಶಿವಶಂಕರ್ ಸೋನಿ ಎಂದು ಬದಲಾಯಿಸಿಕೊಂಡಿದ್ದಾರೆ.
ಮೂರು ದಿನಗಳ ಹಿಂದೆ ಮಹಿಳೆಯೊಬ್ಬರು ಕುಟುಂಬಸ್ಥರ ವಿರುದ್ಧ ಅತ್ಯಾಚಾರ ಮತ್ತು ಗರ್ಭಪಾತ ಕೇಸ ಒತ್ತಾಯಿಸುತ್ತಿರುವ ಆರೋಪದ ಮೇಲೆ ದೂರು ದಾಖಲಿಸಿದ್ದರು. ಮದುವೆ ಆಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಮಾಡಲಾಗಿದೆ ಮತ್ತು ತನ್ನನ್ನು ಹಾಗೂ ಕುಟುಂಬದ ಸದಸ್ಯರನ್ನು ಕೊಲ್ಲುವ ಹೆದರಿಕೆ ಹಾಕಲಾಗುತ್ತಿದೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಾದ ಮೇಲೆ ಆರೋಪಿ ಯುವಕ ಸ್ವಯಂ ಪ್ರೇರಿತನಾಗಿ ಮತಾಂತರಗೊಂಡಿದ್ದಾನೆ. ಮತ್ತು ಇಬ್ಬರು ಇಚ್ಛೆಯ ಮೇರೆಗೆ ಪರಸ್ಪರ ಮದುವೆ ಆಗಿದ್ದಾರೆ ಎಂದು ಕೋತಾವಾಲಿ ಠಾಣೆಯ ಪ್ರಾಣಧಿಕಾರಿ ದೇವೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಮೂಲಕ, ಪ್ರೀಮ ಪ್ರಕರಣವೊಂದು ಸುಖಾಂತ್ಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ಧಾರೆ.