
ಕೋರ್ಟ್ ಕಲಾಪದ ವೇಳೆಯೇ ಕುಸಿದು ಬಿದ್ದು ನ್ಯಾಯವಾದಿ ಸಾವು
ಕೋರ್ಟ್ ಕಲಾಪದ ವೇಳೆಯೇ ಕುಸಿದು ಬಿದ್ದು ನ್ಯಾಯವಾದಿ ಸಾವು
ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲೇ ವಕೀಲರೊಬ್ಬರು ದಿಢೀರನೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ನಡೆದಿರುವುದು ತೆಲಂಗಾಣದ ಹೈಕೋರ್ಟ್‌ನಲ್ಲಿ.
ಹೈಕೋರ್ಟ್‌ನ 21ನೇ ಹಾಲ್‌ನಲ್ಲಿ ಕಲಾಪ ನಡೆಯುತ್ತಿದ್ದ ವೇಳೆ 60 ವರ್ಷ ಪ್ರಾಯದ ವೇಣುಗೋಪಾಲ ರಾವ್ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸಹೋದ್ಯೋಗಿ ವಕೀಲರು ಮತ್ತು ಇತರ ವಕೀಲ ಮಿತ್ರರು ಆಸ್ಪತ್ರೆಗೆ ಸಾಗಿಸಿದರು.
ಒಸ್ಮಾನಿಯಾ ಆಸ್ಪತ್ರೆಗೆ ಧಾವಿಸಿದ ಅವರನ್ನು ಪರೀಕ್ಷಿಸಿದ ವೈದ್ಯರು, ವೇಣುಗೋಪಾಲ ರಾವ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದರು.
ಕೋರ್ಟ್ ಕಲಾಪದ ವೇಳೆ ವಕೀಲರೊಬ್ಬರು ಈ ರೀತಿ ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿರುವುದು ವಕೀಲರ ಸಮುದಾಯದಲ್ಲಿ ಆತೀವ ಶೋಕ ಮತ್ತು ಆಘಾತಕ್ಕೆ ಕಾರಣವಾಗಿದೆ.
ವಕೀಲರು ಅಕಾಲಿಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು, ವಕೀಲರು ಸಭೆ ಸೇರಿ ಮೃತರಿಗೆ ಸಂತಾಪ ಸಲ್ಲಿಸಿದರು. ಮೃತರ ಗೌರವಾರ್ಥ ಮಧ್ಯಾಹ್ನದ ಕಲಾಪವನ್ನು ರದ್ದುಗೊಳಿಸಲಾಯಿತು ಎಂದು ವರದಿಯಾಗಿದೆ.