-->
HSRP ನಂಬರ್ ಪ್ಲೇಟ್‌ಗೆ ಹೆಚ್ಚುವರಿ ಶುಲ್ಕ: ಫೋಕ್ಸ್‌ವ್ಯಾಗನ್ ಶೋರೂಮ್‌ಗೆ ಭರ್ಜರಿ ದಂಡ!

HSRP ನಂಬರ್ ಪ್ಲೇಟ್‌ಗೆ ಹೆಚ್ಚುವರಿ ಶುಲ್ಕ: ಫೋಕ್ಸ್‌ವ್ಯಾಗನ್ ಶೋರೂಮ್‌ಗೆ ಭರ್ಜರಿ ದಂಡ!

HSRP ನಂಬರ್ ಪ್ಲೇಟ್‌ಗೆ ಹೆಚ್ಚುವರಿ ಶುಲ್ಕ: ಫೋಕ್ಸ್‌ವ್ಯಾಗನ್ ಶೋರೂಮ್‌ಗೆ ಭರ್ಜರಿ ದಂಡ!





ವಾಹನಕ್ಕೆ HSRP ನಂಬರ್ ಪ್ಲೇಟ್‌ ಅಳವಡಿಸಲು ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸಿದ ಫೋಕ್ಸ್‌ವ್ಯಾಗನ್ ಶೋರೂಮ್‌ಗೆ ಗ್ರಾಹಕ ನ್ಯಾಯಾಲಯ ಭರ್ಜರಿ ದಂಡ ವಿಧಿಸಿದೆ.


ಧಾರವಾಡದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಶ್ರೀ ಈಶಪ್ಪ ಕೆ. ಭೂತೆ ಮತ್ತು ಸದಸ್ಯರಾದ ವಿಶಾಲಾಕ್ಷಿ ಎ. ಬೋಳಶೆಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಹುಬ್ಬಳ್ಳಿಯ ಫೋಕ್ಸ್‌ವ್ಯಾಗನ್ ಶೋರೂಮ್‌ಗೆ ಈ ದಂಡ ವಿಧಿಸಲಾಗಿದೆ. ಹೊಸ HSRP ನಂಬರ್ ಪ್ಲೇಟ್ ಅಳವಡಿಸಲು ಶೂರೂಮ್ ಅಧಿಕಾರಿಗಳು ಗ್ರಾಹಕರಿಂದ ಹೆಚ್ಚುವರಿಯಾಗಿ ₹200 ಶುಲ್ಕ ಪಡೆದುಕೊಂಡಿದ್ದರು.


ಇದರಿಂದ ಬಾಧಿತರಾಧ ಗ್ರಾಹಕ/ದೂರುದಾರರು ಧಾರವಾಡದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿದ್ದರು.


ಈ ದೂರನ್ನು ವಿಚಾರಣೆಗೆ ಕೈಗೆತ್ತಿಕೊಂಡ ಆಯೋಗವು ದೂರನ್ನು ಪುರಸ್ಕರಿಸಿ ಆದೇಶ ಹೊರಡಿಸಿತು. ಗ್ರಾಹಕ/ ದೂರುದಾರರಿಗೆ ರೂ. 25,000 ಪರಿಹಾರವನ್ನು ನೀಡಿತು. ಜೊತೆಗೆ ರೂ. 10,000 ಮೊಕದ್ದಮೆ ವೆಚ್ಚಗಳು ಮತ್ತು ನಂಬರ್‌ ಪ್ಲೇಟ್‌ಗೆ ಪಡೆಯಲಾಗಿದ್ದ ₹ 200 ಶೇಕಡಾ 10ರ ದಂಡನಾ ಬಡ್ಡಿ ಜೊತೆಗೆ ಮರುಪಾವತಿ ಮಾಡಬೇಕು ಎಂದು ಆದೇಶದಲ್ಲಿ ನಿರ್ದೇಶಿಸಲಾಗಿದೆ.


ಆದೇಶ ಹೊರಡಿಸಿದ 30 ದಿನದೊಳಗೆ ಪಾವತಿ ಮಾಡುವಂತೆ ಗ್ರಾಹಕರ ಆಯೋಗ ಶೋ ರೂಮ್‌ಗೆ ನಿರ್ದೇಶನ ನೀಡಿದೆ.



The Volkswagen showroom in Hubli charged an extra ₹200 for fixing the HSRP number plate. Aggrieved by the customer/complainant approached the Hon'ble Consumer Commission, Dharwad.


The commission allowed the complaint and awarded the customer/complainant compensation of ₹25,000, along with litigation expenses of ₹10,000 and a refund of ₹200 with 10% interest.




Ads on article

Advertise in articles 1

advertising articles 2

Advertise under the article