
ಇ-ಖಾತಾ ಮಾಡಿಸಿಲ್ಲವೇ..? ನಿಮಗಿದೆ ಸಿಹಿ ಸುದ್ದಿ: ರಾಜ್ಯದಲ್ಲಿ ಇ-ಖಾತಾ ಅಭಿಯಾನ - ಎಲ್ಲ ಆಸ್ತಿಗೂ ಇ-ಖಾತಾ ಭಾಗ್ಯ
ಇ-ಖಾತಾ ಮಾಡಿಸಿಲ್ಲವೇ..? ನಿಮಗಿದೆ ಸಿಹಿ ಸುದ್ದಿ: ರಾಜ್ಯದಲ್ಲಿ ಇ-ಖಾತಾ ಅಭಿಯಾನ - ಎಲ್ಲ ಆಸ್ತಿಗೂ ಇ-ಖಾತಾ ಭಾಗ್ಯ
ಇದುವರೆಗೂ ಇ-ಖಾತಾ ಮಾಡಿಸದ ಆಸ್ತಿ ಮಾಲೀಕರಿಗೆ ಒಂದು ಗುಡ್ ನ್ಯೂಸ್. ಇ-ಖಾತಾ ಮಾಡಿಸದ ಆಸ್ತಿ ಮಾಲೀಕರಿಗೆ ಕೊನೆಯ ಅವಕಾಶವನ್ನು ನೀಡಿ ರಾಜ್ಯ ಸರ್ಕಾರ ಅಭಿಯಾನವನ್ನು ಆರಂಭಿಸಿದೆ.
ಮುಂದಿನ ಮೂರು ತಿಂಗಳೊಳಗೆ ರಾಜ್ಯದ ಎಲ್ಲ ಆಸ್ತಿಗಳಿಗೆ ಇ ಖಾತಾ ನೀಡಲು ಸರ್ಕಾರ ಮುಂದಾಗಿದೆ. ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಹಾಗೂ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳು ಈ ಅಭಿಯಾನವನ್ನು ಆರಂಭಿಸಿವೆ. ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಈ ವಿಶೇಷ ಅಭಿಯಾನ ನಡೆಯಲಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಇ ಆಸ್ತಿ ತಂತ್ರಾಂಶ ಬಳಸಿ ಇ ಖಾತಾ ನೀಡುವ ಸೌಲಭ್ಯವನ್ನು 2022ರಿಂದ ಜಾರಿಗೊಳಿಸಲಾಗಿದೆ. ಈಗಾಗಲೇ 23 ಆಸ್ತಿಗೆ ಇಖಾತಾ ನೀಡಲಾಗಿದ್ದು, 32 ಲಕ್ಷ ಆಸ್ತಿಗೆ ಬಿ ಖಾತಾ ದೊರೆಯಲಿದೆ.
ನಿಯಮ ಪಾಲಿಸದೆ ಕಂದಾಯ ಭೂಮಿಯಲ್ಲೇ ನಿರ್ಮಿಸಿದ ಅನಧಿಕೃತ ಬಡಾವಣೆ, ನಿವೇಶನಗಳನ್ನು ಖರೀದಿಸಿ ಮನೆ ಕಟ್ಟಿಸಿಕೊಂಡಿರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಅನುಕೂಲವಾಗಲಿದೆ.