
ಸರ್ಕಾರಿ ಖರಾಬ್ ಜಮೀನಿಗೂ ಖಾತೆ: ಅಧಿಕಾರಿಗಳು, ಜನಪ್ರತಿನಿಧಿ ಸಹಿತ 17 ಮಂದಿಗೆ ಜೈಲು ಶಿಕ್ಷೆ, ದಂಡ
ಸರ್ಕಾರಿ ಖರಾಬ್ ಜಮೀನಿಗೂ ಖಾತೆ: ಅಧಿಕಾರಿಗಳು, ಜನಪ್ರತಿನಿಧಿ ಸಹಿತ 17 ಮಂದಿಗೆ ಜೈಲು ಶಿಕ್ಷೆ, ದಂಡ
ಸರಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ನ್ಯಾಯಾಲಯ ಸರಿಯಾಗಿ ಬಿಸಿ ಮುಟ್ಟಿಸಿದೆ.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ 17 ಮಂದಿಗೆ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಈ ಪೈಕಿ ಮೂವರು ಮೃತಪಟ್ಟಿದ್ಧಾರೆ. ಈ ಘಟನೆ ನಡೆದಿರುವುದು ಕೆಜಿಎಫ್ ಘಟ್ಟಕಾಮಧೇನುಹಳ್ಳಿಯಲ್ಲಿ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ಕೈಗೆತ್ತಿಕೊಂಡ ಕೆಜಿಎಫ್ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಘಟ್ಟ ಕಾಮಧೇನುಹಳ್ಳಿಯ ಹಿಂದಿನ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ 12 ಮಂದಿಗೆ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
ಕೆಜಿಎಫ್ ನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಂ ಮಂಜು ಅವರಿದ್ದ ನ್ಯಾಯಪೀಠ ಈ ಪ್ರಕರಣದಲ್ಲಿ ತೀರ್ಪು ನೀಡಿದೆ.
ತೀರ್ಪಿನ ಪ್ರಕಾರ ಆಗಿನ ಅಧ್ಯಕ್ಷ ಮಜು ಭಾರ್ಗವಿ, ಉಪಾಧ್ಯಕ್ಷ ಶಶಿಧರ್, ಪಿಡಿಓ ರತ್ನಮ್ಮ, ಬಿಲ್ ಕಲೆಕ್ಟರ್ ಮತ್ತು ಕಂಪ್ಯೂಟರ್ ಆಪರೇಟರ್‌ಗಳಾದ ನಾರಾಯಣಸ್ವಾಮಿ ಮತ್ತು ರಾಜೇಂದ್ರ ಅವರು ಶಿಕ್ಷೆಗೊಳಗಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು.
ಅದೇ ರೀತಿ, ಫಲಾನುಭವಿಗಳಾದ ಅಕ್ರಮ ಖಾತೆ ಮಾಡಿಕೊಂಡ ಮುರುಗೇಶ್, ಸುಬ್ರಮಣಿ, ಕದಂಬವತಿ, ಶ್ರೀನಿವಾಸ್, ಪ್ರಿಯ, ಶ್ರೀಧರ್, ಅಣ್ಣಾದೊರೈ, ಆರ್ ಪಾಂಡುರಂಗನ್ ಮತ್ತು ಬಿ ರವಿಚಂದ್ರನ್ ಪ್ರಕರಣದಲ್ಲಿ ಅಪರಾಧಿಗಳಾಗಿದ್ದಾರೆ.
ಉಳಿದ ತಪ್ಪಿತಸ್ಥರಾದ ಗಂಗಾಧರಂ, ಜಗದಂಬಾಲ್, ಮತ್ತು ಎಡ್ವೀನ್ ಮೃತಪಟ್ಟಿದ್ದಾರೆ.
ಪ್ರಕರಣದ ಆರೋಪಿಗಳಾದ ಮಂಜು ಭಾರ್ಗವಿ, ಶಶಿಧರ್, ಪಿಡಿಓ ರತ್ನಮ್ಮ, ಸಿಬ್ಬಂದಿ ನಾರಾಯಣಸ್ವಾಮಿ ಮತ್ತು ರಾಜೇಂದ್ರ ಅವರಿಗೆ ಒಂದು ವರ್ಷದ ಜೈಲು ಮತ್ತು 6,000 ದಂಡ ವಿಧಿಸಲಾಗಿದೆ. ಇನ್ನು ಅಕ್ರಮ ಜಮೀನಿನ ಫಲಾನುಭವಿಗಳಾದ 9 ಮಂದಿಗೆ ಒಂದು ವರ್ಷ ಜೈಲು ಮತ್ತು 2000 ದಂಡ ವಿಧಿಸಲಾಗಿದೆ 12 ಮಂದಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿತ್ತು.