
158 ಸಿವಿಲ್ ಜಡ್ಜ್ ಹುದ್ದೆಗೆ ನೇರ ನೇಮಕಾತಿ: ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ- ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಪ್ರಕಟ
Monday, February 10, 2025
158 ಸಿವಿಲ್ ಜಡ್ಜ್ ಹುದ್ದೆಗೆ ನೇರ ನೇಮಕಾತಿ: ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ- ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಪ್ರಕಟ
ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 158 ಸಿವಿಲ್ ಜಡ್ಜ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದ್ದು, ಕರ್ನಾಟಕ ಹೈಕೋರ್ಟ್ ಈ ಬಗ್ಗೆ ಅಧಿಸೂಚನೆ ಪ್ರಕಟಿಸಿದೆ.
ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು, 2004 ಮತ್ತು ಅದರ ತಿದ್ದುಪಡಿ ಮಾಡಲಾದ ನಿಯಮಗಳು 2011. 2015, 2016 ಮತ್ತು 2024 ಮತ್ತು ಸರ್ವೋಚ್ಚ ನ್ಯಾಯಾಲಯದ SMW (C) No. 2/2024 ದಿನಾಂಕ 07.11.2024ರ ಆದೇಶದನ್ವಯ, ಕರ್ನಾಟಕ ಉಚ್ಚ ನ್ಯಾಯಾಲಯವು 24 ಉಳಿಕೆ (ಬ್ಯಾಕ್ ಲಾಗ್) ಹುದ್ದೆಗಳೂ ಸೇರಿದಂತೆ ಸಿವಿಲ್ ನ್ಯಾಯಾಧೀಶರ 158 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಹೈಕೋರ್ಟ್‌ನ ಅಧಿಸೂಚನೆಯ ಬಗ್ಗೆ ಮಾಹಿತಿ ಇಲ್ಲಿದೆ.