
ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನ್ಯಾ. ತಾಜ್ ಅಲಿ ನದಾಫ್ ಪ್ರಮಾಣ ಸ್ವೀಕಾರ
ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನ್ಯಾ. ತಾಜ್ ಅಲಿ ನದಾಫ್ ಪ್ರಮಾಣ ಸ್ವೀಕಾರ
ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನ್ಯಾ. ತಾಜ್ ಅಲಿ ನದಾಫ್ ಪ್ರಮಾಣ ಸ್ವೀಕಾರ ಮಾಡಿದರು. ಈ ಮೂಲಕ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 50ಕ್ಕೇರಿದೆ.
ಹೈಕೋರ್ಟ್‌ನಲ್ಲಿ 62 ಹುದ್ದೆಗಳಿದ್ದು, ಇನ್ನೂ 12 ಹುದ್ದೆಗಳು ನೇಮಕವಾಗದೆ ಖಾಲಿ ಉಳಿದಿವೆ.
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಅವರು ನದಾಫ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಈ ಘನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ಒದಗಿ ಬಂದಿರುವುದು ನಿಜಕ್ಕೂ ಹೆಮ್ಮೆ. ಸಿಜೆ ಅಂಜಾರಿಯಾ ಮತ್ತು ಸಹೋದ್ಯೋಗಿ ನ್ಯಾಯಮೂರ್ತಿಗಳ ಮಾರ್ಗದರ್ಶನ ಕೋರುತ್ತೇನೆ ಎಂದು ನ್ಯಾ. ನದಾಫ್ ಹೇಳಿದರು.
ಹಾವೇರಿಯ ಶಿಗ್ಗಾಂವ್‌ನಲ್ಲಿ ಜನಿಸಿದ ನದಾಫ್ ಅವರ ತಂದೆ ಮೌಲಾ ಸಾಬ್ ನದಾಫ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದವರು.
ಕಾರವಾರದ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರು ಚಾಮರಾಜಪೇಟೆಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಕೆಎಲ್‌ಇ ಸೊಸೈಟಿ ನಿಜಲಿಂಗಪ್ಪ ಕಾಲೇಜಿನಲ್ಲಿ ಪಿಯುಸಿ ಮತ್ತು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಬಿಎ, ಎಲ್‌ಎಲ್‌ಬಿ ಪದವಿಯನ್ನು ನ್ಯಾ. ನದಾಫ್ ಪೂರೈಸಿದ್ದಾರೆ.