
ಆಸ್ತಿ ಖರೀದಿಗೆ ಸಂಬಂಧಿಸಿದ ಕಾವೇರಿ ಸಾಫ್ಟ್‌ವೇರ್ ಹ್ಯಾಕ್: ಸೈಬರ್ ಠಾಣೆಗೆ ದೂರು ನೀಡಿದ ಮುದ್ರಾಂಕ ಇಲಾಖೆ
ಆಸ್ತಿ ಖರೀದಿಗೆ ಸಂಬಂಧಿಸಿದ ಕಾವೇರಿ ಸಾಫ್ಟ್‌ವೇರ್ ಹ್ಯಾಕ್: ಸೈಬರ್ ಠಾಣೆಗೆ ದೂರು ನೀಡಿದ ಮುದ್ರಾಂಕ ಇಲಾಖೆ
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಸೈಬರ್ ಕಳ್ಳರು ಆಸ್ತಿ ಖರೀದಿಗೆ ಸಂಬಂಧಿಸಿದ ಕಾವೇರಿ ಸಾಫ್ಟ್‌ವೇರ್ ಹ್ಯಾಕ್ ಮಾಡಿದ್ದು, ದತ್ತಾಂಶಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ಧಾರೆ.
ಕರ್ನಾಟಕ ರಾಜ್ಯದ್ಲಿ ಆಸ್ತಿ ಖರೀದಿ ಮತ್ತು ಮಾರಾಟ ಸೇರಿದಂತೆ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದ ಕಾವೇರಿ 2.0 ತಂತ್ರಾಂಶವನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಬೆಳಕಿಗೆ ಬರುತ್ತಲೇ ಮುದ್ರಾಂಕ ಇಲಾಖೆಯ ಅಧಿಕಾರಿಗಳು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಕೆ ಎ ದಯಾನಂದ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೇಂದ್ರ ಸಿಇಎನ್ ಠಾಣೆಯ ಪೋಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ.
ಸರ್ವರ್ ಸಮಸ್ಯೆಯಿಂದ ಕಳೆದ ಕೆಲವು ದಿನಗಳಿಂದ ರಾಜ್ಯದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿತ್ತು. ಐಜಿಆರ್ ಅವರು ಪರಿಶೀಲಿಸಿದಾಗ ಅಪರಿಚಿತರು ಕಾವೇರಿ ಸಾಫ್ಟ್ವೇರ್ ಅನ್ನು ಹ್ಯಾಕ್ ಮಾಡಿರುವುದು ಬೆಳಕಿಗೆ ಬಂತು.
ಸೈಬರ್ ಕಳ್ಳರು ರಹಸ್ಯವಾಗಿ ವೆಬ್‌ಸೈಟ್ ಒಳಪ್ರವೇಶಿಸಿ ಅದರಲ್ಲಿರುವ ದತ್ತಾಂಶಗಳನ್ನು ಕಳವು ಮಾಡಲು ನಕಲಿ ಖಾತೆಗಳನ್ನು ತೆರೆದಿರುವುದು ಪತ್ತೆಯಾಗಿದೆ. ಈ ರೀತಿಯ 62 ಇಮೇಲ್ ಖಾತೆಗಳು ಹಾಗೂ ಅವುಗಳ ಐಪಿ ವಿಳಾಸಗಳ ಪಟ್ಟಿಯನ್ನು ಸ್ಮಾರ್ಟ್ ಗವರ್ನೆಸ್ ಸೆಂಟರ್ ಸಿ.ಎಸ್.ಜಿ ನೀಡಿದೆ.
ಸೈಬರ್ ದಾಳಿ ಕೋರರು ಹ್ಯಾಕ್ ಮಾಡಿದ ಕಾರಣ ಕಾವೇರಿ ವೆಬ್‌ಸೈಟ್‌ನಲ್ಲಿ ಸರ್ವರ್ ಸಮಸ್ಯೆ ಜನವರಿಯಲ್ಲಿಯೂ ಉಂಟಾಗಿತ್ತು. ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿ, ಋಣಭಾರ ಪ್ರಮಾಣ ಪತ್ರ, ವಿವಾಹ ನೋಂದಣಿ, ದೃಢೀಕೃತ ನಕಲು ಮತ್ತು ಇತರ ಸೇವೆಗಳನ್ನು ಉಪನ್ಯೊಂದಣಿ ಕಚೇರಿಗೆ ಒದಗಿಸುತ್ತಿದೆ.