
ಲಿವ್ ಇನ್ ರಿಲೇಷನ್‌ಗೆ ಒಪ್ಪಂದ ಕಡ್ಡಾಯ : ಗಮನ ಸೆಳೆದ ರಾಜಸ್ತಾನ ಹೈಕೋರ್ಟ್‌ನ ವಿಶಿಷ್ಟ ತೀರ್ಪು - ಸಹ ಬಾಳ್ವೆ ಸಂಬಂಧಕ್ಕೆ ನಿಬಂಧನೆ
ಲಿವ್ ಇನ್ ರಿಲೇಷನ್‌ಗೆ ಒಪ್ಪಂದ ಕಡ್ಡಾಯ : ಗಮನ ಸೆಳೆದ ರಾಜಸ್ತಾನ ಹೈಕೋರ್ಟ್‌ನ ವಿಶಿಷ್ಟ ತೀರ್ಪು - ಸಹ ಬಾಳ್ವೆ ಸಂಬಂಧಕ್ಕೆ ನಿಬಂಧನೆ
ಲಿವ್ ಇನ್ ರಿಲೇಶನ್ ವಿಚಾರದಲ್ಲಿ ವಿಶಿಷ್ಟ ಹಾಗೂ ಗಮನ ಸೆಳೆಯುವ ತೀರ್ಪನ್ನು ನೀಡಿರುವ ರಾಜಸ್ಥಾನ ಹೈ ಕೋರ್ಟ್, ಸಹಜೀವನ ಸಂಬಂಧದಲ್ಲಿ ಇರುವವರು ತಮ್ಮ ಸಂಬಂಧದ ಕುರಿತು ಒಪ್ಪಂದ ಮಾಡಿಕೊಂಡು ಅದನ್ನು ಕಡ್ಡಾಯ ನೋಂದಾಯಿಸುವಂತೆ ಆದೇಶ ನೀಡಿದೆ.
ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿ ಅನೂಪ್ ಕುಮಾರ್ ದಂಡು ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು ಸಹಜ ಜೀವನದಲ್ಲಿರುವ ಜೋಡಿ ತಮ್ಮ ಸಂಬಂಧದಿಂದ ಹುಟ್ಟುವ ಮಕ್ಕಳ ಪಾಲನೆಗೆ ಯಾವ ಯೋಜನೆ ರೂಪಿಸಿಕೊಂಡಿದ್ದೇವೆ ಎಂಬುದನ್ನು ಮೊದಲೇ ಸ್ಪಷ್ಟಪಡಿಸಬೇಕಾದ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಆಶಿಸಿದೆ.
ಸಹಜೀವನ ನಡೆಸುತ್ತಿರುವ ಜೋಡಿ ತಮ್ಮ ಸಂಬಂಧದಿಂದ ಹುಟ್ಟುವ ಮಕ್ಕಳ ಪಾಲನೆಗಾಗಿ ರೂಪಿಸಿಕೊಂಡಿರುವ ಯೋಜನೆ ನಮೂದಿಸಬೇಕಾದಂತ ವ್ಯವಸ್ಥೆ ಜಾರಿಗೆ ಬರಬೇಕು ಎಂದು ನ್ಯಾಯಪೀಠ ಆಶಯ ವ್ಯಕ್ತಪಡಿಸಿದೆ.
ಸಹ ಜೀವನದ ಸಂಗಾತಿಗಳು ತಮ್ಮ ನಡುವಿನ ಸಂಬಂಧದ ಕುರಿತು ಒಪ್ಪಂದ ಮಾಡಬೇಕು. ಆ ದಾಖಲೆಯನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಸರಕಾರಿ ಅಧಿಕಾರಿಗಳಿಗೆ ಸೂಚಿಸಿ ಆದೇಶ ಮಾಡಿದೆ. ಈ ದಾಖಲೆಯಲ್ಲಿ, ಹಣ ಸಂಪಾದಿಸದೆ ಇರುವ ತನ್ನ ಸ್ತ್ರೀ ಸಂಗಾತಿಗೆ ಜೀವನಾಂಶವನ್ನು ಹೇಗೆ ಪಾವತಿಸಬೇಕು ಎಂಬುದರ ಕುರಿತಂತೆಯೂ ವಿವರಗಳಿರಬೇಕು ಎಂದು ನ್ಯಾಯ ಪೀಠ ತಾಕಿತು ಮಾಡಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಯಿದೆ ರೂಪಿಸುವವರೆಗೆ ಈ ಒಪ್ಪಂದ ಈ ರೀತಿಯ ಒಪ್ಪಂದ ಮಾಡಬೇಕಾಗುತ್ತದೆ. ಇಂತಹ ಒಂದು ವ್ಯವಸ್ಥೆ ಜಾರಿಗೆ ಬರಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಲಿವಿ ಇನ್ ಸಂಬಂಧ ಕುರಿತಾದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಮಂಡಳಿಯಲ್ಲಿ ನೊಂದಾಯಿಸಬೇಕು ಎಂದು ನ್ಯಾಯಾಲಯ ಆಶಯ ವ್ಯಕ್ತಪಡಿಸಿದ್ದು, ತನ್ನ ಆದೇಶದ ಪ್ರತಿಯನ್ನು ಕೇಂದ್ರ ಮತ್ತು ರಾಜ್ಯದ ಸರಕಾರದ ಹಿರಿಯ ಅಧಿಕಾರಿಗಳಿಗೆ ಕಳಿಸುವಂತೆ ಸೂಚನೆ ನೀಡಿದೆ. ಅಲ್ಲದೆ, ಈ ಕುರಿತಂತೆ ಮಾಡಲಾದ ಆದೇಶ ಪಾಲನೆ ವರದಿಯನ್ನು ಸಲ್ಲಿಸುವಂತೆ ನ್ಯಾಯಪೀಠ ಸೂಚನೆ ನೀಡಿದೆ.
ಲಿವಿ ಇನ್ ಸಂಬಂಧ ಕಾನೂನು ಬಾಹಿರವಲ್ಲ, ಅದಕ್ಕೆ ಕಾನೂನು ಸಮ್ಮತಿ ಇದೆ ಎಂಬುದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದರೂ, ಸಮಾಜದ ದೃಷ್ಟಿಯಲ್ಲಿ ಈ ಸಂಬಂಧ ಈಗಲೂ ಸ್ವೀಕಾರಾರ್ಹವಲ್ಲ. ಹಾಗಾಗಿ, ಸಹಜೀವನ ಸಂಬಂಧದ ವಿಚಾರವಾಗಿ ಎದ್ದಿರುವ ಕೆಲ ಕಾನೂನು ಪ್ರಶ್ನೆಗಳ ಸಂಬಂಧ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಸಹಜೀವನ ಸಂಬಂಧಗಳಿಂದ ಜನಿಸಿದ ಅಪ್ರಾಪ್ತ ಮಕ್ಕಳನ್ನು ಅವರ ಪೋಷಕರು ವಿಶೇಷವಾಗಿ ತಂದೆ ಪೋಷಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ಏಕೆಂದರೆ ಇಂತಹ ಸಂಬಂಧಗಳಿಂದ ಮಹಿಳೆಯರು ಹೆಚ್ಚಾಗಿ ತೊಂದರೆಗೀಡಾಗುತ್ತಾರೆ ಎಂಬುದನ್ನು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಈ ದಾಂಪತ್ಯದ ಪರಿಕಲ್ಪನೆಯನ್ನು ಸಮಾಜ ಅನೈತಿಕ ಎಂದು ಪರಿಗಣಿಸಿದೆ. ಸಾರ್ವಜನಿಕರು ಬಹುತೇಕವಾಗಿ ಅದನ್ನು ಸ್ವೀಕರಿಸದೆ ಇದ್ದರೂ ಕಾನೂನಿಯ ದೃಷ್ಟಿಯಲ್ಲಿ ಅದು ಕಾನೂನುಬಾಹಿರ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ಹೇಳಿದೆ.