-->
ಹೈಕೋರ್ಟ್ ನ್ಯಾಯಾಧೀಶರ ವಿಚಾರಣೆಗೆ ಅಧಿಕಾರವಿದೆ ಎಂದ ಲೋಕಪಾಲ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಹೈಕೋರ್ಟ್ ನ್ಯಾಯಾಧೀಶರ ವಿಚಾರಣೆಗೆ ಅಧಿಕಾರವಿದೆ ಎಂದ ಲೋಕಪಾಲ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಹೈಕೋರ್ಟ್ ನ್ಯಾಯಾಧೀಶರ ವಿಚಾರಣೆಗೆ ಅಧಿಕಾರವಿದೆ ಎಂದ ಲೋಕಪಾಲ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ





ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ 2013ರ ಅಡಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ವಿಚಾರಣೆಗೆ ಒಳಪಡಿಸಲು ತನಗೆ ಅಧಿಕಾರ ಇದೆ ಎಂಬ ಲೋಕಪಾಲ್‌ರ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.


ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸೂರ್ಯಕಾಂತ್ ಹಾಗೂ ಅಭಯ ಶ್ರೀನಿವಾಸ್ ಓಕಾ ಅವರಿದ್ದ ವಿಶೇಷ ನ್ಯಾಯಪೀಠ ಈ ಆದೇಶ ನೀಡಿದೆ.


ಲೋಕಪಾಲ್ ಆದೇಶ ತುಂಬಾ ಗೊಂದಲದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಲೋಕಪಾಲ್‌ ರಿಜಿಸ್ಟ್ರಾರ್‌ಗೆ ನೋಟೀಸ್ ಜಾರಿಗೊಳೀಸಿದೆ.


ಹೈಕೋರ್ಟ್‌ನ ಹಾಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ವಿರುದ್ಧ ಸಲ್ಲಿಸಲಾಗಿರುವ ಎರಡು ದೂರುಗಳ ವಿಚಾರಣೆ ವೇಳೆ ಲೋಕಪಾಲ್‌ ಜನವರಿ 27ರಂದು ಆದೇಶ ಹೊರಡಿಸಿತ್ತು. ಈ ಆದೇಶದಲ್ಲಿ ತನಗೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ವಿಚಾರಣೆಗೆ ಒಳಪಡಿಸಲು ತನಗೆ ಅಧಿಕಾರ ಇದೆ ಎಂದು ಹೇಳಿಕೊಂಡಿತ್ತು.


ಈ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಈ ನೋಟೀಸ್ ಜಾರಿಗೊಳಿಸಿದೆ. ಜೊತೆಗೆ ಹೈಕೋರ್ಟ್‌ ನ್ಯಾಯಮೂರ್ತಿಗಳ ಹೆಸರನ್ನು ಬಹಿರಂಗ ಪಡಿಸದಂತೆ ದೂರುದಾರರಿಗೆ ಮತ್ತು ಲೋಕಪಾಲ್‌ಗೆ ನಿರ್ದೇಶನ ನೀಡಿದೆ.


ಪ್ರಕರಣದ ವಿವರ:

ದೂರುದಾರರ ವಿರುದ್ಧ ಖಾಸಗಿ ಕಂಪೆನಿಯೊಂದು ಪ್ರಕರಣ ದಾಖಲಿಸಿತ್ತು. ಹೈಕೋರ್ಟ್‌ವೊಂದರ ನ್ಯಾಯಮೂರ್ತಿಯೊಬ್ಬರು ಈ ಅರ್ಜಿಯನ್ನು ವಿಚಾರಣೆ ಮಾಡಬೇಕಿತ್ತು.


ಆ ಕಂಪೆನಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ, ಹೈಕೋರ್ಟ್ ಹಾಲಿ ಹೆಚ್ಚುವರಿ ನ್ಯಾಯಮೂರ್ತಿಯೊಬ್ಬರು ಜಿಲ್ಲಾ ನ್ಯಾಯಾಲಯವೊಂದರ ಹೆಚ್ಚುವರಿ ನ್ಯಾಯಾಧೀಶರು ಮತ್ತು ಅರ್ಜಿ ವಿಚಾರಣೆ ನಡೆಸಬೇಕಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಪ್ರಭಾವ ಬೀರಿದ್ದರು ಎಂಬುದು ಆರೋಪ.


ಈ ಆರೋಪದ ಬಗ್ಗೆ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಗಳ ವಿರುದ್ಧ ಎರಡು ಪ್ರತ್ಯೇಕ ದೂರನ್ನು ಅರ್ಜಿದಾರರು ದಾಖಲಿಸಿದ್ದರು.


ಈ ದೂರುಗಳನ್ನು ಪರಿಗಣಿಸಿದ್ದ ಲೋಕಪಾಲ, ಹೆಚ್ಚುವರಿ ನ್ಯಾಯಮೂರ್ತಿಗಳ ವಿರುದ್ಧ ಜನವರಿ 27ರಂದು ಈ ಆದೇಶ ಹೊರಡಿಸಿತ್ತು.


Ads on article

Advertise in articles 1

advertising articles 2

Advertise under the article