
ಚೆಕ್ ಅಮಾನ್ಯ ಪ್ರಕರಣ: ಆಸ್ತಿ ವ್ಯಾಜ್ಯ ಕೋರ್ಟ್‌ನಲ್ಲಿ ಇರುವಾಗ ನೀಡಿದ ಚೆಕ್: ಆರೋಪಿ ಬಾಧ್ಯಸ್ಥನೇ..?
Wednesday, February 5, 2025
ಚೆಕ್ ಅಮಾನ್ಯ ಪ್ರಕರಣ: ಆಸ್ತಿ ವ್ಯಾಜ್ಯ ಕೋರ್ಟ್‌ನಲ್ಲಿ ಇರುವಾಗ ನೀಡಿದ ಚೆಕ್: ಆರೋಪಿ ಬಾಧ್ಯಸ್ಥನೇ..?
ಆಸ್ತಿಯ ಮೇಲಿನ ವ್ಯಾಜ್ಯ ವಿಚಾರಣೆಗೆ ಬಾಕಿ ಇರುವಾಗ, ಭದ್ರತೆಗಾಗಿ ಮಾರಾಟಗಾರರಿಂದ ಆಸ್ತಿಯ ಖರೀದಿದಾರನಿಗೆ ನೀಡಿದ ಚೆಕ್ ಅಮಾನ್ಯಗೊಂಡರೆ, ಆರೋಪಿ ಬಾಧ್ಯಸ್ಥನೇ ಎಂಬ ಪ್ರಶ್ನೆಗೆ ಕರ್ನಾಟಕ ಹೈಕೋರ್ಟ್ ಉತ್ತರಿಸಿದೆ.
ಕರ್ನಾಟಕ ಹೈಕೋರ್ಟ್‌ನ ಮಾನ್ಯ ನ್ಯಾಯಮೂರ್ತಿ ರಾಜೇಶ್ ರೈ ಕೆ. ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಆಸ್ತಿಯ ವ್ಯಾಜ್ಯ ನ್ಯಾಯಾಲಯದಲ್ಲಿ ಬಾಕಿ ಇರುವಾಗ, ಮಾರಾಟಗಾರನು ಖರೀದಿದಾರನಿಗೆ ಭದ್ರತೆಗಾಗಿ ನೀಡಿದ ಚೆಕ್‌ನಲ್ಲಿ ಕಾಣಿಸಿದ ಮೊತ್ತವು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಸಾಲ ಅಲ್ಲ. ಹಾಗಾಗಿ, ಅದು ನೆಗೋಷಿಯಬಲ್ಸ್ ಇನ್ಸ್‌ಟ್ರಮೆಂಟ್ಸ್ ಆಕ್ಟ್ 1881 ಪ್ರಕಾರ ದಂಡನೆಗೆ ಅರ್ಹವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣ: ಚಂದ್ರ Vs ಅನಿತಾ
ಕರ್ನಾಟಕ ಹೈಕೋರ್ಟ್, Crl.Apl: 332/2012 Dated 28-07-2023