
ನವ ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
ನವ ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
ಪ್ರಸ್ತುತ ರಾಜ್ಯದಲ್ಲಿ ಕಾನೂನು ಪದವಿಯನ್ನು ಪಡೆದು ವಕೀಲರ ವೃತ್ತಿಯನ್ನು ಆರಂಭಿಸಿರುವ ನವ ಕಾನೂನು ಪದವೀಧರರಿಗೆ 2024 25 ನೇ ಸಾಲಿನ 'ಪ್ರೋತ್ಸಾಹ ಧನ' ವಿತರಿಸುವ ಸಲುವಾಗಿ ಸರಕಾರಿ ಅಧಿಸೂಚನೆ ಹೊರಡಿಸಲಾಗಿದೆ.
ಸರಕಾರಿ ಆದೇಶದಲ್ಲಿ ತಿಳಿಸಿದಂತೆ ಅರ್ಹ ಕಾನೂನು ಪದವೀಧರರಿಗೆ ಶರತ್ತು ಮತ್ತು ಮಾರ್ಗಸೂಚಿಗೆ ಅನ್ವಯವಾಗುವಂತೆ ಒಳಪಡಿಸಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಅರ್ಜಿಯನ್ನು ಆಯಾ ಜಿಲ್ಲೆಯ 'ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು', ನವ ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಯ ಆಯ್ಕೆ ಸಮಿತಿ ಇವರಿಗೆ ಸಲ್ಲಿಸಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನ 10.02.2025
ಅರ್ಜಿ ಸಲ್ಲಿಸಲು ಕೊನೆಯ ದಿನ 9. 3.2025
ಅರ್ಜಿದಾರರಿಗೆ ಇರಬೇಕಾದ ಅರ್ಹತೆಗಳು
ಅರ್ಜಿದಾರರು ರಾಜ್ಯ ವಕೀಲರ ಪರಿಷತ್ತಿನ ಅಡಿ ನಿಗದಿತ ಅವಧಿಯಲ್ಲಿ ವಕೀಲ ವೃತ್ತಿಗೆ ನೋಂದಾಯಿಸಿ ಕೊಂಡಿರಬೇಕು.
ಅರ್ಹ ಅರ್ಜಿದಾರರಿಗೆ ಈ ಯೋಜನೆಯ ಪ್ರೋತ್ಸಾಹ ಧನದ ಮೊತ್ತ ಪ್ರತಿ ತಿಂಗಳು 2000/- ರಂತೆ 24 ತಿಂಗಳು ಪ್ರೋತ್ಸಾಹ ಧನ ಸಿಗಲಿದೆ.
ಸರಕಾರಿ, ಅರಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ವಯೋನಿವೃತ್ತಿ, ಕಡ್ಡಾಯ ನಿವೃತ್ತಿ ಅಥವಾ ಇಚ್ಛಾ ನಿವೃತ್ತಿ ಹೊಂದಿದ ನಂತರ ವಕೀಲ ವೃತ್ತಿ ನಡೆಸಲು ಇಚ್ಛಿಸುವ ಕಾನೂನು ಪದವಿಧರರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
ಅದೇ ರೀತಿ, ಸೇವೆಯಿಂದ ತೆಗೆದು ಹಾಕಲ್ಪಟ್ಟ, ಅಮಾನತುಗೊಂಡ ಕಾನೂನು ಪದವಿಧರರಿಗೂ ಅನ್ವಯವಾಗದು.
ಅರ್ಜಿದಾರರ ಕುಟುಂಬದ ವೇತನ ವಾರ್ಷಿಕವಾಗಿ ರುಪಾಯಿ 40,000/- ಮೀರಿರಬಾರದು.
ಈ ಸೌಲಭ್ಯದಡಿ ಅರ್ಜಿ ಹಾಕುವರು ರಾಜ್ಯ ಸರಕಾರದ ಬೇರೆ ಯಾವುದೇ ಇಲಾಖೆಯ ಯೋಜನೆ ಅಡಿ ಆಯ್ಕೆಗೊಂಡ ಫಲಾನುಭವಿಗಳು ಆಗಿರಬಾರದು.
ವಕೀಲ ವೃತ್ತಿಯಲ್ಲಿ ತೊಡಗುವ ಕಾನೂನು ಪದವೀಧರರು ರಾಜ್ಯ ವಕೀಲರ ಸಂಘದಿಂದ ನೋಂದಾಯಿಸಿದ ನಂತರ ಸ್ಥಳೀಯ ವಕೀಲರ ಸಂಘದ ಅಧ್ಯಕ್ಷರಿಂದ ಪ್ರಮಾಣ ಪತ್ರ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.
ಅದನ್ನು ಸಂಬಂಧಪಟ್ಟ ಸಮಿತಿಯ ಸಂಬಂಧಿತ ತಾಲೂಕಿನ ಹಿರಿಯ ನ್ಯಾಯಾಧೀಶರುಗಳ ಮೂಲಕ ಮತ್ತು ಜಿಲ್ಲಾ ಹಂತದಲ್ಲಿ ನೇರವಾಗಿ ಸಮಿತಿಯ ಅಧ್ಯಕ್ಷರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಆಯಾ ಜಿಲ್ಲೆ ಯಾ ಪ್ರಾದೇಶಿಕ ವಕೀಲರ ಸಂಘವನ್ನು ಸಂಪರ್ಕಿಸಲು ಕೋರಲಾಗಿದೆ.