
ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆ: ಬೆಂಗಳೂರು ವಕೀಲರ ಸಂಘದ ಚುನಾವಣೆ ಸಂಪನ್ನ
ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆ: ಬೆಂಗಳೂರು ವಕೀಲರ ಸಂಘದ ಚುನಾವಣೆ ಸಂಪನ್ನ
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ್ ಸುಬ್ಬಾರೆಡ್ಡಿ ಪುನರಾಯ್ಕೆ ಆಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಗೌಡ ಆಯ್ಕೆ ಆಗಿದ್ದಾರೆ.
ಮೀಸಲು ಸ್ಥಾನವಾಗಿರುವ ಖಜಾಂಚಿ ಹುದ್ದೆಗೆ ಶ್ವೇತಾ ರವಿಶಂಕರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಿರೀಶ್ ಕುಮಾರ್ ಸಿಎಸ್ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ವಕೀಲರ ಸಂಘ ಏಷ್ಯಾದ ಅತಿ ದೊಡ್ಡ ವಕೀಲರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಅಧ್ಯಕ್ಷ ಹುದ್ದೆಗೆ ಹಿರಿಯವಾಗಿ ಮಾಜಿ ಅಧ್ಯಕ್ಷ ಎಪಿ ರಂಗನಾಥ್ ಎಎಬಿ ಮಾಜಿ ಪ್ರಧಾನ ಕಾರ್ಯದರ್ಶಿ ಟಿ.ಜಿ. ರವಿ ಗೌಡ, ಆರ್. ರಾಜಣ್ಣ ಮತ್ತು ರಾಜಶೇಖರ್ ಸ್ಪರ್ಧೆ ನಡೆಸಿದ್ದರು.
ವಿವೇಕ್ ಸುಬ್ಬಾರೆಡ್ಡಿ ಅವರು 6,820 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದರು. ಮಾಜಿ ಅಧ್ಯಕ್ಷ ಎಪಿ ರಂಗನಾಥ್ ಅವರು 4,518 ಮತಗಳನ್ನು ಪಡೆದು ಎರಡನೆಯವರಾಗಿ ಸ್ಥಾನ ಪಡೆದರು. ಉಳಿದಂತೆ ಆರ್. ರಾಜಣ್ಣ 1973 ಮತಗಳನ್ನು ಪಡೆದರೆ ಟಿ ಜಿ ರವಿ 378 ಮತಗಳನ್ನು ಪಡೆದರು.
ಅಧ್ಯಕ್ಷ ಗಾದಿಗೆ ಸ್ಪರ್ಧೆ ನಡೆಸಿದ್ದ ನಂಜಪ್ಪ ಕಾಳೇಗೌಡ ಕೇವಲ 123 ಮತ್ತು ರಾಜಶೇಖರ್ ಕೇವಲ 90 ಮತ ಪಡೆದು ಕೊನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.