-->
ವಿವಾಹ 'ಶೂನ್ಯ'ವಾದರೂ ಸಂಗಾತಿಯಿಂದ ಜೀವನಾಂಶ ಕೇಳಲು ಅವಕಾಶವಿದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಿವಾಹ 'ಶೂನ್ಯ'ವಾದರೂ ಸಂಗಾತಿಯಿಂದ ಜೀವನಾಂಶ ಕೇಳಲು ಅವಕಾಶವಿದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಿವಾಹ 'ಶೂನ್ಯ'ವಾದರೂ ಸಂಗಾತಿಯಿಂದ ಜೀವನಾಂಶ ಕೇಳಲು ಅವಕಾಶವಿದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ ವಿವಾಹವು ಶೂನ್ಯ (Void) ಎಂದು ಘೋಷಣೆಯಾಗಿದ್ದರೂ ಆ ಪ್ರಕರಣದಲ್ಲಿ ಸಂಗಾತಿಯಿಂದ ಜೀವನಾಂಶ ಅಥವಾ ಶಾಶ್ವತ ಮೊತ್ತವನ್ನು ಪಡೆಯಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ಅಭಯ ಶ್ರೀನಿವಾಸ ಓಕಾ, ಶ್ರೀ ಅಹ್ಸನುದ್ದೀನ್ ಅಮಾನುಲ್ಲ ಮತ್ತು ಆಗಸ್ಟಿನ್ ಜಾರ್ಜ್‌ ಮಸಿಹ್‌ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಸೆಕ್ಷನ್ 11ರ ಅಡಿಯಲ್ಲಿ ಶೂನ್ಯ ವಿವಾಹ ಎಂದು ಘೋಷಣೆಯಾಗಿದ್ದರೂ, ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 25ರ ಅಡಿಯಲ್ಲಿ ಪಕ್ಷಕಾರರು ತನ್ನ ಸಂಗಾತಿಯಿಂದ ಜೀವನಾಂಶ ಪಡೆದುಕೊಳ್ಳಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.


ಸಿಆರ್‌ಪಿಸಿಯ ಸೆಕ್ಷನ್ 125 ಮತ್ತು ವಿವಾಹ ಕಾಯ್ದೆಯ ಸೆಕ್ಷನ್ 25 ಸಂಪೂರ್ಣವಾಗಿ ಭಿನ್ನವಾದ ಸೆಕ್ಷನ್‌ಗಳಾಗಿವೆ ಎಂಬುದನ್ನು ನ್ಯಾಯಪೀಠ ತನ್ನ ತೀರ್ಪಿನಲ್ಲಿ ವಿವರಿಸಿದೆ.


ಸಿಆರ್‌ಪಿಸಿಯ ಸೆಕ್ಷನ್ 125 ಯಲ್ಲಿ ಅನ್ವಯವಾಗುವ ಸಂಗತಿಯು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 25ಕ್ಕೆ ಅನ್ವಯವಾಗುವುದಿಲ್ಲ ಎಂದು ಅದು ಹೇಳಿದೆ.


ಸಿಆರ್‌ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಪತ್ನಿ ಮತ್ತು ಮಕ್ಕಳಿಗೆ ಪತಿಯಿಂದ ಜೀವನಾಂಶ ಕೇಳುವ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದರೆ, ಪತಿಗೆ ಈ ಸೆಕ್ಷನ್ ಅನ್ವಯವಾಗದು ಎಂದು ನ್ಯಾಯಪೀಠ ಹೇಳಿದೆ.


ಆದರೆ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 25ರ ಅಡಿಯಲ್ಲಿ ಪತಿ ಅಥವಾ ಪತ್ನಿ ತನ್ನ ಸಂಗಾತಿಯಿಂದ ಜೀವನಾಂಶ ಯಾ ಶಾಶ್ವತ ಮೊತ್ತದ ಪರಿಹಾರವನ್ನು ಯಾಚಿಸಬಹುದಾಗಿದೆ ಎಂದು ನ್ಯಾಯಪೀಠ ವಿವರಿಸಿದೆ.



a spouse whose marriage has been declared void under section 11 of Hindu Marriage act, is entitled to seek permanent alimony or maintainance from the other spouse by invoking section 25 of the act- Supreme Court


ಪ್ರಕರಣ: X Vs Y

ಸುಪ್ರೀಂ ಕೋರ್ಟ್‌, Civil Appeal 2536/2019 Dated 12-02-2025

Ads on article

Advertise in articles 1

advertising articles 2

Advertise under the article