-->
ಇಲ್ಲದೇ ಇರುವ "ಸುಪ್ರೀಂ ಕೋರ್ಟ್ ತೀರ್ಪು" ಉಲ್ಲೇಖ: ಸಿವಿಲ್ ಜಡ್ಜ್‌ ವಿರುದ್ಧ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶ

ಇಲ್ಲದೇ ಇರುವ "ಸುಪ್ರೀಂ ಕೋರ್ಟ್ ತೀರ್ಪು" ಉಲ್ಲೇಖ: ಸಿವಿಲ್ ಜಡ್ಜ್‌ ವಿರುದ್ಧ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶ

ಇಲ್ಲದೇ ಇರುವ "ಸುಪ್ರೀಂ ಕೋರ್ಟ್ ತೀರ್ಪು" ಉಲ್ಲೇಖ: ಸಿವಿಲ್ ಜಡ್ಜ್‌ ವಿರುದ್ಧ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶ





ಅಸ್ತಿತ್ವದಲ್ಲಿ ಇಲ್ಲದೇ ಇರುವ "ಸುಪ್ರೀಂ ಕೋರ್ಟ್ ತೀರ್ಪು" ಉಲ್ಲೇಖ ಮಾಡಿ ತೀರ್ಪನ್ನು ನೀಡಿರುವ ಪ್ರಕರಣವೊಂದರಲ್ಲಿ ಅಂತಹ ವಿವಾದಾತ್ಮಕ ತೀರ್ಪು ನೀಡಿರುವ ಸಿವಿಲ್ ಜಡ್ಜ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ ಆದೇಶ ಹೊರಡಿಸಿದೆ.


"ಸಮ್ಮಾನ್ ಕ್ಯಾಪಿಟಲ್ Vs ಮಂತ್ರಿ ಇನ್ಸ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ." ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಸಿವಿಲ್ ಪ್ರಕರಣವೊಂದರ ಅರ್ಜಿಯ ವಿಚಾರಣೆ ನಡೆಸಿದ್ದ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು, ಸುಪ್ರೀಂ ಕೋರ್ಟ್ ಮತ್ತು ಇತರ ಎರಡು ತೀರ್ಪುಗಳನ್ನು ಉಲ್ಲೇಖಿಸಿ ತೀರ್ಪು ನೀಡಿದ್ದರು. ವಾಣಿಜ್ಯ ವಿವಾದದಲ್ಲಿ ಸಿವಿಲ್ ನ್ಯಾಯಾಲಯದ ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸುವ ಪರಿಷ್ಕರಣಾ ಅರ್ಜಿಯ ವಿಚಾರಣೆಯಲ್ಲಿ ಸಿಟಿ ಸಿವಿಲ್ ನ್ಯಾಯಾಧೀಶರು ಈ ಗಂಭೀರ ಲೋಪ ಎಸಗಿದ್ದರು.


ಆದರೆ, ಈ ತೀರ್ಪಿನಲ್ಲಿ ಉಲ್ಲೇಖಿಸಿದ ಸುಪ್ರೀಂ ಕೋರ್ಟ್ ಹಾಗೂ ಇತರ ಎರಡು ತೀರ್ಪುಗಳು ಅಸ್ತಿತ್ವದಲ್ಲೇ ಇರಲಿಲ್ಲ. ನ್ಯಾಯಾಧೀಶರ ಈ ಕೃತ್ಯಕ್ಕೆ ಕಾನೂನಿನ ಪ್ರಕಾರ ಹೆಚ್ಚಿನ ತನಿಖೆ ಮತ್ತು ಸೂಕ್ತ ಕ್ರಮದ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.


ವಿಚಾರಣಾ ನ್ಯಾಯಾಲಯವು ಅಸ್ತಿತ್ವದಲ್ಲಿ ಇಲ್ಲದ ತೀರ್ಪುಗಳನ್ನು ಉಲ್ಲೇಖಿಸಿ ಅರ್ಜಿಯನ್ನು ತಿರಸ್ಕರಿಸಿದೆ.  ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್ ಅಥವಾ ಇತರ ಯಾವುದೇ ಕಾನೂನು ಡಾಟಾ ಬೇಸ್‌ನಲ್ಲಿ ಅವುಗಳ ಯಾವುದೇ ಅಧಿಕೃತ ದಾಖಲೆಗಳು ಕಂಡುಬರದ ಹಿನ್ನೆಲೆಯಲ್ಲಿ ಸಿವಿಲ್ ಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಲಾದ ತೀರ್ಪುಗಳನ್ನು ಮೋಸದಿಂದ ತಯಾರಿಸಲಾಗಿದೆ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರು ಮಾಹಿತಿ ನೀಡಿದ್ದರು.


ಚಾಟ್ ಜಿಪಿಟಿಯಂತ ಕೃತಕ ಬುದ್ದಿಮತ್ತೆ ಸಾಧನಗಳು ಕೆಲವೊಮ್ಮೆ ಕಾಲ್ಪನಿಕ ಪ್ರಕರಣ ತೀರ್ಪುಗಳನ್ನು ಸೃಜಿಸಬಹುದು. ಪ್ರಸ್ತುತ ಪ್ರಕರಣದಲ್ಲಿ ಇದು ಒಂದು ಸಾಧ್ಯತೆಯಾಗಿರಬಹುದು ಎಂದು ವಕೀಲರು ಹೇಳಿದರು.


ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ನ್ಯಾಯಪೀಠ, ತೀರ್ಪಿನ ಪ್ರತಿಯನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲು ಹೈಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿದ್ದು, ಸಿವಿಲ್ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದೆ.



ಪ್ರಕರಣ: ಸಮ್ಮಾನ್ ಕ್ಯಾಪಿಟಲ್ Vs ಮಂತ್ರಿ ಇನ್ಸ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ.

ಕರ್ನಾಟಕ ಹೈಕೋರ್ಟ್, CRP 49/2025 Dated 24-03-2025

  

  

  

Related Posts

Ads on article

Advertise in articles 1

advertising articles 2

Advertise under the article