
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷರ ನಾಮನಿರ್ದೇಶನಕ್ಕೆ ಆಕ್ಷೇಪ: ಬಿಸಿಐ, ಕೆಎಸ್‌ಬಿಸಿಗೆ ಹೈಕೋರ್ಟ್ ನೋಟೀಸ್
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷರ ನಾಮನಿರ್ದೇಶನಕ್ಕೆ ಆಕ್ಷೇಪ: ಬಿಸಿಐ, ಕೆಎಸ್‌ಬಿಸಿಗೆ ಹೈಕೋರ್ಟ್ ನೋಟೀಸ್
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) ಅಧ್ಯಕ್ಷರಾಗಿ ಎಸ್.ಎಸ್. ಮಿತ್ತಲಕೋಡ್ ಅವರನ್ನು ನಾಮನಿರ್ದೇಶನ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಬಿಸಿಐ, ಕೆಎಸ್‌ಬಿಸಿಗೆ ನೋಟೀಸ್ ಜಾರಿಗೊಳಿಸಿದೆ.
ನೇಮಕಾತಿ ಕುರಿತ ಐಬಿಸಿ ಮಾಡಿರುವ ಆದೇಶ ರದ್ದು ಕೋರಿ ಕೆಎಸ್‌ಬಿಸಿ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಕೋಟೇಶ್ವರ್ ರಾವ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನೋಟೀಸ್ ಜಾರಿಗೊಳಿಸಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಸ್.ಎಸ್. ಯಡ್ರಾಮಿ ವಾದ ಮಾಡಿದರು. ಕೆಎಸ್‌ಬಿಸಿ ಮತ್ತು ಮಿತ್ತಲಕೋಡ್ ಪರ ವಕೀಲ ಟಿ.ವಿ. ವಿವೇಕಾನಂದ ಅವರಿಗೆ ನೋಟೀಸ್ ಪಡೆಯಲು ನ್ಯಾಯಪೀಠ ನಿರ್ದೇಶಿಸಿತು. ಐಬಿಸಿ ಪರ ಅನುಭಾ ಶ್ರೀವಾಸ್ತವ ನೋಟೀಸ್ ಪಡೆದಿದ್ದು, ಆಕ್ಷೇಪಣೆಗೆ 10 ದಿನಗಳ ಕಾಲಾವಕಾಶ ಕೋರಿದರು.
20240ರ ಮೇನಲ್ಲಿ ಕೆಎಸ್‌ಬಿಸಿ ಅಧ್ಯಕ್ಷರಾದ ವಿಶಾಲ್ ರಘು ಮತ್ತು ಉಪಾಧ್ಯಕ್ಕಷರಾದ ವಿನಯ್ ಮಂಗಳೇಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಈ ಸ್ಥಾನಕ್ಕೆ 20240ರ ಜುಲೈ 23ರಂದು ಚುನಾವಣೆ ನಿಗದಿಯಾಗಿತ್ತು. ಮೇ 31ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಮಧ್ಯೆ, ಬಿಸಿಐ ಅಧ್ಯಕ್ಷರ ನೇಮಕಾತಿ ಮಾಡಿರುವುದು ಕಾನೂನುಬಾಹಿರ ಎಂದು ಅರ್ಜಿದಾರರು ವಾದಿಸಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಹೊಸತಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಕೂಡಲೇ ಚುನಾವಣೆಗಳನ್ನು ನಡೆಸಲು ನಿರ್ದೇಶನ ಕೊಡಬೇಕು ಹಾಗೂ ವಕೀಲರ ಕಾಯ್ದೆಯ ಸೆಕ್ಷನ್ 8ಎ ಪ್ರಕಾರ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಕಾಲಾವಧಿ ವಿಸ್ತರಿಸಿದ ಹೊರತಾಗಿಯೂ ಕೆಎಸ್‌ಬಿಸಿಯು ಇಲ್ಲಿಯವರೆಗೆ ಪ್ರ್ಯಾಕ್ಟೀಸ್ ಮಾಡದ ವಕೀಲರು ಮತ್ತು ಅವರ ಸರ್ಟಿಫಿಕೇಟ್‌ಗಳನ್ನು ಪರಿಶೀಲಿಸಲು ಕೆಎಸ್‌ಬಿಸಿ ವಿಫಲವಾದ ಹಿನ್ನೆಲೆಯಲ್ಲಿ ನಿಕಟಪೂರ್ವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಎಸ್.ಎಸ್. ಮಿತ್ತಲಕೋಡ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು.