-->
ಪತ್ನಿ, ಮಕ್ಕಳಿಗೆ ಜೀವನಾಂಶ ನೀಡದ ವೈದ್ಯ ಪತಿಗೆ ಜೈಲು: ಕಾನೂನು ಗೌರವಿಸದ ವ್ಯಕ್ತಿಗೆ ಶಿಕ್ಷೆ ಅನಿವಾರ್ಯ ಎಂದ ಹೈಕೋರ್ಟ್‌

ಪತ್ನಿ, ಮಕ್ಕಳಿಗೆ ಜೀವನಾಂಶ ನೀಡದ ವೈದ್ಯ ಪತಿಗೆ ಜೈಲು: ಕಾನೂನು ಗೌರವಿಸದ ವ್ಯಕ್ತಿಗೆ ಶಿಕ್ಷೆ ಅನಿವಾರ್ಯ ಎಂದ ಹೈಕೋರ್ಟ್‌

ಪತ್ನಿ, ಮಕ್ಕಳಿಗೆ ಜೀವನಾಂಶ ನೀಡದ ವೈದ್ಯ ಪತಿಗೆ ಜೈಲು: ಕಾನೂನು ಗೌರವಿಸದ ವ್ಯಕ್ತಿಗೆ ಶಿಕ್ಷೆ ಅನಿವಾರ್ಯ ಎಂದ ಹೈಕೋರ್ಟ್‌





ಕೌಟುಂಬಿಕ ನ್ಯಾಯಾಲಯದ ಆದೇಶದ ಪ್ರಕಾರ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡದ ವೈದ್ಯ ಪತಿಗೆ ಬಾಂಬೆ ಹೈಕೋರ್ಟ್‌ ಜೈಲು ಶಿಕ್ಷೆ ವಿಧಿಸಿದೆ.


ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಜಿ.ಎಸ್. ಕುಲಕರ್ಣಿ ಮತ್ತು ಅದ್ವೈತ್ ಸೇತ್‌ನಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.


ನ್ಯಾಯಾಲಯ ನೀಡಿದ ವಿವಿಧ ಆದೇಶಗಳನ್ನು ಕಡೆಗಣಿಸಿ ಇಬ್ಬರು ಮಕ್ಕಳು ಹಾಗೂ ಪತ್ನಿಗೆ ಉದ್ದೇಶಪೂರ್ವಕವಾಗಿ ಜೀವನಾಂಶ ನೀಡದ ವೈದ್ಯರಿಗೆ ಆರು ತಿಂಗಳ ಸಿವಿಲ್ ಜೈಲು ಶಿಕ್ಷೆ ವಿಧಿಸಿ ನ್ಯಾಯಪೀಠ ತೀರ್ಪು ಪ್ರಕಟಿಸಿದೆ.


ವೈದ್ಯರು ನಿಯಮ ಪಾಲಿಸುವುದನ್ನು ತಪ್ಪಿಸಲು ಮಾಡಿದ ಪ್ರಯತ್ನಗಳನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿದ್ದು, ಆದೇಶ ಉಲ್ಲಂಘಿಸಿದವರಿಗೆ ಕಾನೂನಿನ ಬಗ್ಗೆ ಗೌರವ ಇಲ್ಲ ಎಂದು ಆರೋಪಿ ವೈದ್ಯನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.


ವೈದ್ಯ ಕೋರ್ಟ್ ಆದೇಶ ಉಲ್ಲಂಘಿಸಿದ್ದಲ್ಲದೆ, ಪತ್ನಿ ಮತ್ತು ತನ್ನ ಹೆಣ್ಣು ಮಗಳನ್ನು ಕಾಪಾಡಿಕೊಳ್ಳಬೇಕೆಂಬ ಸಹಜ ಹಾಗೂ ನ್ಯಾಯಯುತ ಕಾಳಜಿ ಇಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.


ಜೀವನಾಂಶದ ಮೊತ್ತ ವಿಪರೀತವಾಗಿದೆ. ಇದನ್ನು ಪಾವತಿಸಲು ವೈದ್ಯ ಅಸಮರ್ಥರಾಗಿದ್ಧಾರೆ. ಮತ್ತು ಪಾವತಿ ಮಾಡದೇ ಇರುವುದಕ್ಕೆ ಸೂಕ್ತ ಕಾರಣ ಇದೆ ಎಂಬ ಪತಿ ಪರ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಸುಪ್ರೀಂ ಕೋರ್ಟ್‌ ಹಾಗೂ ವಿವಿಧ ಹೈಕೋರ್ಟ್‌ಗಳು ನೀಡಿದ ಆದೇಶದ ಪ್ರಕಾರವೇ ಜೀವನಾಂಶವನ್ನು ನಿರ್ಧರಿಸಲಾಗಿದೆ ಎಂದು ಹೇಳಿತು.


ಕೋರ್ಟ್ ಆದೇಶ ಪಾಲಿಸದೇ ಇರುವುದು ಆತನ ಬಹಿರಂಗ ಪ್ರತಿಭಟನೆಯ ಕೃತ್ಯ ಎಂದು ಅಭಿಪ್ರಾಯಪಟ್ಟ ನ್ಯಾಪೀಠ, ಆರೋಪಿಯ ನಿರ್ಲಕ್ಷ್ಯಕ್ಕೆ ಶಿಕ್ಷೆ ನೀಡದೇ ಹಾಗೆ ಬಿಡಲು ಸಾಧ್ಯವಿಲ್ಲ. ಹಾಗಾಗಿ, ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸುತ್ತಿದೆ ಎಂದು ಹೇಳಿತು. ಕೋರ್ಟ್ ಕಲಾಪದ ವೇಳೆ ಹಾಜರಿದ್ದ ಪತಿ ವೈದ್ಯನನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಹೈಕೋರ್ಟ್ ಆದೇಶ ನೀಡಿತು.


ಪ್ರಕರಣ: ಡಾ. ಸಂಗೀತಾ ಮನೀಶ್ ಗನ್ವೀರ್ Vs ಮನೀಶ್ ಬಾಪುರಾವ್ ಗನ್‌ವೀರ್ 

ಬಾಂಬೆ ಹೈಕೋರ್ಟ್, Contempt Petition 297/2019 Dated 3-03-2025

Ads on article

Advertise in articles 1

advertising articles 2

Advertise under the article