
ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಬದಲಾವಣೆ: ಕೆಎಸ್‌ಬಿಸಿಗೆ ಮಿಠಲಕೋಡ್ ನೂತನ ಸಾರಥಿ
Monday, March 3, 2025
ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಬದಲಾವಣೆ: ಕೆಎಸ್‌ಬಿಸಿಗೆ ಮಿಠಲಕೋಡ್ ನೂತನ ಸಾರಥಿ
ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ನೂತನ ಅಧ್ಯಕ್ಷರಾಗಿ ಬಾಗಲಕೋಟೆ ಮೂಲದ ವಕೀಲರಾದ ಸಿದ್ದಲಿಂಗಪ್ಪ ಮಿತ್ತಲಕೋಡ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಎಚ್.ಎಲ್. ವಿಶಾಲ್ ರಘು ಅವರಿಂದ ತೆರವಾದ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮಿತ್ತಲಕೋಡ್ ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಮಿತ್ತಲ ಕೋಡ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಕಾಲಾವಧಿ ವಿಸ್ತರಿಸಿದ ಹೊರತಾಗಿಯು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಈವರೆಗೆ ವಕೀಲಿಕೆ ಮಾಡದ ವಕೀಲರು ಅಥವಾ ಅವರ ಸರ್ಟಿಫಿಕೇಟ್‌ಗಳನ್ನು ಪರಿಶೀಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಿತ್ತಲಕೋಡ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ ಎನ್ನಲಾಗಿದೆ.