
ಚೆಕ್ ಅಮಾನ್ಯ ಪ್ರಕರಣಗಳಲ್ಲಿ ದೂರುದಾರರಿಗೆ ಸಮರ್ಪಕ, ನ್ಯಾಯಯುತ ಪರಿಹಾರ ಖಾತ್ರಿ ಮಾಡುವಂತಿರಬೇಕು: ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣಗಳಲ್ಲಿ ದೂರುದಾರರಿಗೆ ಸಮರ್ಪಕ, ನ್ಯಾಯಯುತ ಪರಿಹಾರ ಖಾತ್ರಿ ಮಾಡುವಂತಿರಬೇಕು: ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಆರೋಪಿಗೆ ವಿಧಿಸಲಾಗುವ ದಂಡವು ಫಿರ್ಯಾದಿಗೆ ಚೆಕ್ ಮೊತ್ತ ಹಾಗೂ ವಾರ್ಷಿಕ ಶೇಕಡಾ 6ರಷ್ಟು ಮೊತ್ತದ ಹಣವನ್ನು ಪರಿಹಾರವಾಗಿ ನೀಡುವಂತೆ ಇರಬೇಕು. ಈ ರೀತಿಯ ತೀರ್ಪನ್ನು ವಿಚಾರಣಾ ನ್ಯಾಯಾಲಯಗಳು ನೀಡುವಂತಿರಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್. ಎಸ್. ಶೆಖಾವತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ನ್ಯಾಯಪೀಠವು ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಬದಿಗೆ ಸರಿಸಿ, ಪರಿಹಾರ ಮತ್ತು ಶಿಕ್ಷೆಯ ಪ್ರಮಾಣದ ಬಗ್ಗೆ ಮತ್ತೆ ಸಮರ್ಪಕ ನ್ಯಾಯೀತರ್ಮಾನ ಮಾಡುವಂತೆ ಸೂಚನೆ ನೀಡಿ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಕಳುಹಿಸಿತು.
ಚೆಕ್‌ನ ದ್ವಿಗುಣ ಮೊತ್ತದಷ್ಟು ಪರಿಹಾರ ಮತ್ತು ಗರಿಷ್ಟ ಎರಡು ವರ್ಷಗಳ ಜೈಲು ವಾಸದ ಶಿಕ್ಷೆಯನ್ನು ನೀಡುವ ಅಧಿಕಾರವಿದ್ದರೂ ವಿಚಾರಣಾ ನ್ಯಾಯಾಲಯಗಳು ಈ ಅಧಿಕಾರವನ್ನು ಪ್ರಯೋಗಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ನ್ಯಾಯಪೀಠ, ಫಿರ್ಯಾದುದಾರರು ವ್ಯವಹಾರದ ದಿನದಿಂದ ಪ್ರಕರಣ ದಾಖಲಿಸಿದ ಬಳಿಕ ಆ ಪ್ರಕರಣ ಇತ್ಯರ್ಥದ ವರೆಗೆ ಸಾಕಷ್ಟು ನೊಂದು ಹೋಗಿರುತ್ತಾರೆ. ಅವರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡುವುದು ನ್ಯಾಯದಾನದ ಲಕ್ಷ್ಯವಾಗಿರಬೇಕು ಎಂದು ಹೇಳಿತು.
ಚೆಕ್ ಅಮಾನ್ಯ ್ಪರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ತಪ್ಪಿತಸ್ಥ ಎಂದು ತೀರ್ಮಾನ ಮಾಡುವುದು ಮುಖ್ಯ. ಅದೇ ರೀತಿ. ಫಿರ್ಯಾದಿಗೆ ಸಮರ್ಪಕ ಪರಿಹಾರ ಮತ್ತು ಆರೋಪಿಗೆ ತಕ್ಕುದಾದ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಬೇಕು ಎಂದು ತೀರ್ಪು ನೀಡಿತು.
ಇದೇ ವೇಳೆ, ಸುಪ್ರೀಂ ಕೋರ್ಟ್ 2010ರಲ್ಲಿ ದಾಮೋದರ್ ಎಸ್. ಪ್ರಭು Vs ಸಯ್ಯದ್ ಬಾಬಲಾಲ್ ಎಚ್. ಪ್ರಕರಣದಲ್ಲಿ ವಿಶ್ಲೇಷಿಸಿದಂತೆ, ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಪರಿಹಾರದ ಮೊತ್ತವನ್ನು ನಿರ್ಧರಿಸುವುದು ಆರೋಪಿಗೆ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವುದಕ್ಕಿಂತ ಹೆಚ್ಚಿನದಾಗಿದೆ ಎಂದು ಹೇಳಿರುವುದನ್ನು ತೀರ್ಪಿನಲ್ಲಿ ಪ್ರಸ್ತಾಪಿಸಿತು.
ಈ ಎಲ್ಲ ಹಿನ್ನೆಲೆಯಲ್ಲಿ ಆರೋಪಿಯು ಫಿರ್ಯಾದಿಗೆ ಚೆಕ್‌ನ ಮೊತ್ತಕ್ಕೆ ಕನಿಷ್ಟ ಶೇ. 6ರಷ್ಟು ಬಡ್ಡಿ ಮೊತ್ತವಾದರೂ ನೀಡುವ ಹಾಗೆ ಪರಿಹಾರದ ಮೊತ್ತವನ್ನು ನಿರ್ಧರಿಸಬೇಕು ಎಂದು ಕಿವಿಮಾತು ಹೇಳಿತು.
ಪ್ರಕರಣ: ಜುಗ್‌ಜಿತ್ ಕೌರ್ Vs ರಾಜ್ವಿಂದರ್ ಸಿಂಗ್
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, CRR 151/2025(O&M), Dated 10-03-2025
Supreme Court in Damoder S. Prabhu v. Sayed Babalal H. (2010), wherein it was held that “with respect to the offence of dishonour of cheques, it is the compensatory aspect of the remedy which should be given priority over the punitive aspect.”