
13 ವರ್ಷಗಳ ಕಾನೂನು ಹೋರಾಟಕ್ಕೆ ಸಂದ ಜಯ: ವಕೀಲರ ಬೇಷರತ್ ಕ್ಷಮೆ ಯಾಚಿಸಿದ ಮಾಧ್ಯಮ
13 ವರ್ಷಗಳ ಕಾನೂನು ಹೋರಾಟಕ್ಕೆ ಸಂದ ಜಯ: ವಕೀಲರ ಬೇಷರತ್ ಕ್ಷಮೆ ಯಾಚಿಸಿದ ಮಾಧ್ಯಮ
ವಕೀಲರನ್ನು ಮಾಧ್ಯಮಗಳ ಸುದ್ದಿ ಪ್ರಸಾರದಲ್ಲಿ ಗೂಂಡಾ ವಕೀಲರೆಂದು ಹೀಯಾಳಿಸಿದ ಮಾಧ್ಯಮಗಳ ವಿರುದ್ಧ ಸತತ 13 ವರ್ಷಗಳ ಕಾನೂನು ಹೋರಾಟಕ್ಕೆ ಜಯ ಸಂದಿದೆ.
ಆಗ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಮುಖ್ಯ ಸಂಪಾದಕರಾಗಿದ್ದ ಶ್ರೀ ವಿಶ್ವೇಶ್ವರ ಭಟ್ ಅವರು ಬಹಿರಂಗವಾಗಿ ವಕೀಲರ ಬೇಷರತ್ ಕ್ಷಮೆ ಯಾಚಿಸಿದ ಘಟನೆ ಧಾರವಾಡ ವಕೀಲರ ಸಂಘದಲ್ಲಿ ನಡೆದಿದೆ.
2012ರಲ್ಲಿ ನಡೆದ ಬೆಂಗಳೂರಿನ ಸಿಟಿ ಸಿವಿಲ್ ಕೊರ್ಟ ಆವರಣದಲ್ಲಿ ವಕೀಲರ ಹಾಗೂ ಮಾಧ್ಯಮ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ವರದಿ ಮಾಡಿದ್ದ ಕೆಲವೊಂದು ಮಾಧ್ಯಮ ಸಂಸ್ಥೆಗಳು ವಕೀಲರನ್ನು ಗುಂಡಾ ಹೀಯಾಳಿಸಿ, ಅವಮಾನಿಸಿ ಸುದ್ದಿ ಪ್ರದಾರ ಮಾಡಿತ್ತು.
ಈ ಸುದ್ದಿ ಪ್ರಸಾರ ಮಾಡಿದ್ದರ ಕುರಿತು ಧಾರವಾಡ ವಕೀಲರ ಸಂಘದಲ್ಲಿ ಜರುಗಿದ ಸಭೆಯಲ್ಲಿ ತೀರ್ಮಾನದಂತೆ ಸುವರ್ಣ ನ್ಯೂಸ್ 24×7 ಮತ್ತು ಕನ್ನಡಪ್ರಭದ ಅಂದಿನ ಮುಖ್ಯ ಸಂಪಾದಕರಾದ ವಿಶ್ವೇಶ್ವರ ಭಟ್ ಬೇಷರತ್ ಕ್ಷಮೆ ಯಾಚಿಸಿದ್ದರು.
ಮಧ್ಯಮ ಸಂಸ್ಥೆಗಳ ಮೇಲೆ ವಕೀಲರಾದ ಕೆ.ಎಚ್. ಪಾಟೀಲರವರು ದಾಖಲಿಸಿದ್ದ ಮಾನಹಾನಿ ಪ್ರಕರದಣಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯುಲು ಬಂದಾಗ ಅರೋಪಿಗಳಿಗೆ ಜಾಮೀನು ನೀಡಬಾರದು ಎಂದು ಧಾರವಾಡ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಪ್ರಬಲ ವಿರೋಧ ವ್ಯಕ್ತಪಡಿಸಿದರು.
ಆ ಸಂದರ್ಭದಲ್ಲಿ ಪ್ರಕರಣದ ಅರೋಪಿತರಾದ ಶ್ರೀ ವಿಶ್ವೇಶ್ವರ ಭಟ್ ಹಾಗೂ ಶ್ರೀ ಸೆಲ್ವರಾಜ್ ರವರು ಧಾರವಾಡ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪತ್ರಕರ್ತರು ಹಾಗೂ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯದ ಸಮಸ್ತ ವಕೀಲರಲ್ಲಿ ಬೇಷರತ್ತಾಗಿ ಕ್ಷಮೆ ಕೋರಿದರು. ಈ ಮೂಲಕ ವಕೀಲರ ನ್ಯಾಯಯುತ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
13 ವರ್ಷಗಳ ಸುದೀರ್ಘ ಕಾನೂನು ಹೋರಾಟ ಸುಪ್ರೀಂ ಕೋರ್ಟ್ ಅಂಗಳಕ್ಕೂ ತಲುಪಿತ್ತು.
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟನಲ್ಲಿ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಅರೋಪಿತರು ಅನಿವಾರ್ಯವಾಗಿ ಧಾರವಾಡ ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣ ಎದುರಿಸುವ ಸಂದರ್ಭ ಎದುರಾಗಿತ್ತು.
ಅರೋಪಿತರಾದ ಹಿರಿಯ ಪತ್ರಕರ್ತ ಶ್ರೀ ವಿಶ್ವೇಶ್ವರ ಭಟ್ ಹಾಗೂ ಸೆಲ್ವರಾಜರವರು ಧಾರವಾಡ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಾಧ್ಯಮದ ಸಮ್ಮುಖದಲ್ಲಿ ವಕೀಲರ ಸಮುದಾಯದ ಕ್ಷಮೆ ಕೋರಿದ್ದು ವಕೀಲರ ಕಾನೂನು ಹೋರಾಟಕ್ಕೆ ಸಂದ ಗೆಲುವಾಗಿದೆ.
ಇನ್ನು ಮುಂದೆ ವಕೀಲರ ಹಾಗೂ ವಕೀಲರ ಸಮುದಾಯದ ಬಗ್ಗೆ ಮಾನಹಾನಿಕಾರವಾಗಿ ಮಾತನಾಡುವವರಿಗೆ ಈ ಪ್ರಕರಣ ಎಚ್ಚರಿಕೆಯ ಗಂಟೆಯಾಗಿದೆ.