-->
2025-26ರ ಶೈಕ್ಷಣಿಕ ವರ್ಷದಲ್ಲಿ ಶಾಲಾ ಸೇರ್ಪಡೆಯಲ್ಲಿ ವಯೋಮಿತಿ ಸಡಿಲಿಕೆ: ವಯಸ್ಸಿನಲ್ಲಿ ಈ ವರ್ಷ ಮಾತ್ರ ಸಡಿಲಿಕೆ- ಸರ್ಕಾರ ಸುತ್ತೋಲೆ

2025ರ ಜೂನ್‌ 1ರ ದಿನದಂದು 5 ವರ್ಷ 5 ತಿಂಗಳು ತುಂಬಿದ ಮಕ್ಕಳಿಗೆ ಒಂದನೇ ತರಗತಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ವಯಸ್ಸಿನ ಈ ರಿಯಾಯಿತಿ ಈ ವರ್ಷಕ್ಕೆ ಮಾತ್ರ ಸೀಮಿತವಾಗಿದೆ.

ಈ ರಿಯಾಯಿತಿ 2025-26ರ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗಿದ್ದು, ಅದೂ ರಾಜ್ಯ ಮಂಡಳಿಯ ಅಡಿಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ.

ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಸುತ್ತೋಲೆಯನ್ನು ಪ್ರಕಟಿಸಿದೆ. ವಯೋಮಾನ ಮಾನದಂಡದ ಸಡಿಲಿಕೆ ಒಂದು ಬಾರಿಗೆ ಮಾತ್ರ ಸೀಮಿತವಾಗಿದೆ. ಪ್ರಮಾಣಿತ ಕನಿಷ್ಟ ವಯಸ್ಸಿನ ಅವಶ್ಯಕತೆ ಆರು ವರ್ಷಗಳಾಗಿದ್ದು, 2026-27ರಿಂದ ಈ ನಿಯಮ ಕಡ್ಡಾಯವಾಗಿ ಅನುಷ್ಟಾನಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ಮತ್ತು ಯು.ಕೆ.ಜಿ. ಪ್ರವೇಶಕ್ಕೆ 5 ವರ್ಷದ ವಯಸ್ಸಿನ ಮಿತಿಯನ್ನು ಪಾಲಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

Ads on article

Advertise in articles 1

advertising articles 2

Advertise under the article