
ಹಿರಿಯ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ: ಬಿಸಿಐ ಸಹಿತ ವಕೀಲರ ಸಂಘಟನೆಗಳ ವ್ಯಾಪಕ ಖಂಡನೆ
ಹಿರಿಯ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ: ಬಿಸಿಐ ಸಹಿತ ವಕೀಲರ ಸಂಘಟನೆಗಳ ವ್ಯಾಪಕ ಖಂಡನೆ
ಭಾರತೀಯ ವಕೀಲ ಪರಿಷತ್ತಿನ ಸದಸ್ಯರು, ಪದಾಂಕಿತ ಹಿರಿಯ ವಕೀಲರು, ಆದ ಶ್ರೀ ವೈ ಆರ್ ಸದಾಶಿವ ರೆಡ್ಡಿ ಅವರ ಕಚೇರಿಗೆ ನುಗ್ಗಿ ವಕೀಲರಾದ ಸದಾಶಿವ ರೆಡ್ಡಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯನ್ನು ಭಾರತೀಯ ವಕೀಲರ ಮಂಡಳಿ (ಬಿಸಿಐ) ತೀವ್ರವಾಗಿ ಖಂಡಿಸಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಕೋಟೇಶ್ವರ್ ರಾವ್, ಬೆಂಗಳೂರು ಯುವ ವಕೀಲರ ವೇದಿಕೆ ಸಹಿತ ವಿವಿಧ ಸಂಘಟನೆಗಳು, ವಕೀಲರು ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಭಾರತೀಯ ವಕೀಲರ ಪರಿಷತ್ತಿನ ಸದಸ್ಯರು ಹಾಗೂ ಹಿರಿಯ ವಕೀಲರಾದ ಶ್ರೀ ವೈ.ಆರ್.ಸದಾಶಿವರೆಡ್ಡಿಯವರ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಏಕಾಏಕಿ ಶ್ರೀ .ವೈ.ಆರ್.ಸದಾಶಿವರೆಡ್ಡಿಯವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಈ ಘಟನೆ ಅತ್ಯಂತ ಖಂಡನಿಯವಾಗಿದ್ದು, ವಕೀಲರ ರಕ್ಷಣೆಗಾಗಿ ಕಾಯ್ದೆ ಜಾರಿಯಾಗಿದ್ದರೂ ಕೂಡಾ ದುಷ್ಕರ್ಮಿಗಳು ಕಾನೂನಿನ ಭಯ ಇಲ್ಲದೇ ಹಿರಿಯ ವಕೀಲರ ಕಚೇರಿಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಕೃತ್ಯ ಅತ್ಯಂತ ಆಘಾತಕಾರಿ ಮತ್ತು ಖಂಡನೀಯ ಘಟನೆಯಾಗಿದೆ ಎಂದು ಕೋಟೇಶ್ವರ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯ ವಕೀಲರ ಮೇಲೆ ಮಾರಣಾಂತಿಕವಾಗಿ ಹಲ್ಲೆಯ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಈ ಕೂಡಲೇ ಪೋಲಿಸರು ದೂರು ದಾಖಲಿಸಿಕೊಂಡು ತಪ್ಪಿತಸ್ಥ ಆರೋಪಿಗಳನ್ನು ಬಂಧನ ಮಾಡಿ ಸೂಕ್ತವಾದ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಸಿಐ ಮತ್ತು ಕೆಎಸ್ ಬಿಸಿ ಆಗ್ರಹಿಸಿದೆ.
ಹಿರಿಯ ವಕೀಲರ ಕಚೇರಿಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ವಕೀಲರ ಸಮುದಾಯದಲ್ಲಿ ತೀವ್ರ ಆತಂಕ ಹಾಗೂ ಭಯದ ವಾತವರಣ ಸೃಷ್ಟಿಯಾಗಿದೆ. ವಕೀಲರ ಪ್ರತಿನಿಧಿಯಾಗಿ ಭಾರತದ ವಕೀಲರ ಪರಿಷತ್ತಿನ ಸದಸ್ಯರ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆಯಾಗಿರುವುದು ಅತ್ಯಂತ ಆತಂಕದ ಘಟನೆಯಾಗಿದೆ ಎಂದು ಕೋಟೇಶ್ವರ ರಾವ್ ಹೇಳಿದ್ದಾರೆ.
ಈ ಮಾರಣಾಂತಿಕ ಹಲ್ಲೆ ಘಟನೆಯ ಕುರಿತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತಕ್ಷಣ ತುರ್ತು ಸಭೆ ಕರೆದು ಘಟನೆಯ ಕುರಿತು ಚೆರ್ಚಿಸಬೇಕು ಹಾಗೂ ಹಿರಿಯ ವಕೀಲರ ಮೆಲೆ ನಡೆದ ಮಾರಣಾಂತಿಕ ಹಲ್ಲೆ ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ವಕೀಲರು ಪ್ರತಿಭಟನೆಗೆ ಕರೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಸದರಿ ಘಟನೆ ಇಡಿ ವಕೀಲರ ಸಮುದಾಯ ಪ್ರತಿನಿಧಿಸುವ ಹಿರಿಯ ವಕೀಲರ ಮೆಲೆ ನಡೆದ ಹಲ್ಲೆಯಾಗಿರುವದರಿಂದ ಈ ಕೂಡಲೇ ಸರಕಾರಕ್ಕೆ ಮನವಿ ಸಲ್ಲಿಸಿ ವಕೀಲರ ಮೆಲೆ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.