ವಕೀಲರನ್ನು ಕಲಾಪದಲ್ಲಿ ಪಾಲ್ಗೊಳ್ಳದಂತೆ ತಡೆಯುವ ಅಧಿಕಾರ ವಕೀಲರ ಸಂಘಕ್ಕೆ ಇಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ವಕೀಲರನ್ನು ಕಲಾಪದಲ್ಲಿ ಪಾಲ್ಗೊಳ್ಳದಂತೆ ತಡೆಯುವ ಅಧಿಕಾರ ವಕೀಲರ ಸಂಘಕ್ಕೆ ಇಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಯಾವುದೇ ವಕೀಲರು ನ್ಯಾಯಾಲಯಗಳ ಮುಂದೆ ಹಾಜರಾಗುವುದನ್ನು ತಡೆಯುವ ಅಧಿಕಾರ ವಕೀಲರ ಸಂಘಗಳಿಗೆ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್.ಎಂ. ಸುಬ್ರಹ್ಮಣ್ಯಮ್ ಮತ್ತು ನ್ಯಾಯಮೂರ್ತಿ ಸಿ. ಕುಮಾರಪ್ಪನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
"ವಿ. ಸೆಂಥಿಲ್ ವರ್ಸಸ್ ತಮಿಳುನಾಡು ಮತ್ತು ಪಾಂಡಿಚೇರಿ ವಕೀಲರ ಪರಿಷತ್ತು" ಪ್ರಕರಣದಲ್ಲಿ ದಿನಾಂಕ 2-08-2024ರಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದ್ದು, ಕಾನೂನು ಅಭ್ಯಾಸವು ಸಂವಿಧಾನದ ಅಡಿಯಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕು ಎಂದು ಪುನರುಚ್ಚರಿಸಿದೆ.
ವಕೀಲರ ಕಾಯ್ದೆಯು ವಕೀಲರಿಗೆ ಎಲ್ಲ ನ್ಯಾಯಾಲಯಗಳ ಮುಂದೆ ವಾದಿಸುವ ಹಕ್ಕನ್ನು ಒದಗಿಸುತ್ತದೆ ಎಂಬುದನ್ನು ನೆನಪಿಸಿದ ನ್ಯಾಯಪೀಠ, ವಕೀಲರು ತಮ್ಮ ಸಹೋದ್ಯೋಗಿ ವಕೀಲರ ಜೊತೆಗೆ ಸೌಹಾರ್ದಯುತವಾದ ಸಂಬಂಧವನ್ನು ರೂಪಿಸಬೇಕು ಮತ್ತು ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಮತ್ತು ವಕೀಲರ ನಡವಳಿಕೆಗಳು ಕೋರ್ಟ್ ಕಲಾಪಕ್ಕೆ ಯಾವುದೇ ರೀತಿಯಲ್ಲೂ ಬಾಧಕ ಉಂಟು ಮಾಡಬಾರದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಕೀಲರ ಸಂಘದ ಸದಸ್ಯರನ್ನು ಕೇವಲ ಅಮಾನತುಗೊಳಿಸುವ ಮೂಲಕ ಅಥವಾ ನ್ಯಾಯಾಲಯದ ಆವರಣದಲ್ಲಿ ಕಾನೂನು ಅಭ್ಯಾಸ ಮಾಡುವುದಕ್ಕೆ ಅವರಿಗೆ ಅನಾನುಕೂಲತೆ ಉಂಟು ಮಾಡುವ ಮೂಲಕ ವಕೀಲರ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಪೀಠ ತಾಕೀತು ಮಾಡಿತು.
ಪ್ರಕರಣ: ವಿ. ಸೆಂಥಿಲ್ ವರ್ಸಸ್ ತಮಿಳುನಾಡು ಮತ್ತು ಪಾಂಡಿಚೇರಿ ವಕೀಲರ ಪರಿಷತ್ತು
ಮದ್ರಾಸ್ ಹೈಕೋರ್ಟ್, WP 20133/2024 Dated 2-08-2024