
ಕುಡಿದ ಮತ್ತಿನಲ್ಲಿ ಗೆಳೆಯನ ಮನೆಗೆ ಹೋದ ಬಳಿಕ ಅತ್ಯಾಚಾರ: ಒಪ್ಪಿತ ಸೆಕ್ಸ್ ಎಂಬ ಹೈಕೋರ್ಟ್ ಅಭಿಮತಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ
ಕುಡಿದ ಮತ್ತಿನಲ್ಲಿ ಗೆಳೆಯನ ಮನೆಗೆ ಹೋದ ಬಳಿಕ ಅತ್ಯಾಚಾರ: ಒಪ್ಪಿತ ಸೆಕ್ಸ್ ಎಂಬ ಹೈಕೋರ್ಟ್ ಅಭಿಮತಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ
ಕುಡಿದ ಮತ್ತಿನಲ್ಲಿ ಗೆಳೆಯನ ಜೊತೆಗೆ ಆತನ ಮನೆಗೆ ತೆರಳಿದರೆ ಅತ್ಯಾಚಾರವಲ್ಲ, ಅದೊಂದು ಒಪ್ಪಿತ ಸೆಕ್ಸ್ ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಮಸೀಹ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಹೈಕೋರ್ಟ್ ಜಡ್ಜ್ ಅಭಿಮತಕ್ಕೆ ಕೆಂಡಾಮಂಡಲವಾಗಿದೆ.
ದೂರುದಾರ ಸಂತ್ರಸ್ತೆ ಮಹಿಳೆಯೇ ಸಮಸ್ಯೆ ತಂದುಕೊಂಡಳು, ಇದು ಅವಳಾಗಿಯೇ ಆಹ್ವಾನ ಮಾಡಿಕೊಂಡ ಸಮಸ್ಯೆ ಎಂಬ ಹೈಕೋರ್ಟ್ ಜಡ್ಜ್ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಒಂದೇ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ನೀಡಿದ ಹೇಳಿಕೆಗಳು ಆಘಾತಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟಿತು.
ಆರೋಪಿಗೆ ಜಾಮೀನು ನೀಡಬೇಕು ಎನಿಸಿದರೆ ನೀಡಿ. ಆಧರೆ, ಸಂತ್ರಸ್ತೆಯನ್ನು ದೂಷಣೆ ಮಾಡುವುದು ಏಕೆ. ತನ್ನನ್ನು ತಾನೇ ಅಪಾಯಕ್ಕೆ ತಂದೊಡ್ಡಿದರು ಎಂಬ ಮಾತು ಏಕೆ? ಇಂತಹ ವಿಚಾರದಲ್ಲಿ ನ್ಯಾಯಮೂರ್ತಿಗಳು ತುಂಬಾ ಜಾಗರೂಕತೆಯಿಂದ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಹೇಳಿದೆ.
ಕೆಲ ದಿನಗಳ ಹಿಂದಷ್ಟೇ, ಸ್ಥನ ಹಿಡಿದರೆ, ಲಾಡಿ ಎಳೆದರೆ ಅತ್ಯಾಚಾರವಲ್ಲ ಎಂಬ ಇನ್ನೊಬ್ಬ ಜಡ್ಜ್ ಹೇಳಿಕೆ ದೇಶಾದ್ಯಂತ ವಿವಾದ ಸೃಷ್ಟಿಸಿತ್ತು. ಇದಾದ ಬೆನ್ನಲ್ಲೇ ಸಂತ್ರಸ್ತೆಯೇ ಅತ್ಯಾಚಾರಕ್ಕೆ ಕಾರಣ ಎಂಬ ಮತ್ತೊಂದು ಜಡ್ಜ್ ಹೇಳಿಕೆ ಬಂದಿದೆ. ನ್ಯಾಯಮೂರ್ತಿಗಳು ಸೂಕ್ಷ್ಮ ಸಂವೇದನಾಶೀಲರಾಗಿರಬೇಕು ಎಂದು ನ್ಯಾಯಪೀಠ ಬುದ್ದಿಮಾತು ಹೇಳಿದೆ.