-->
ಬಿಸಿಲ ಧಗೆ: 8 ಜಿಲ್ಲೆಗಳು, ಒಂದು ಹೈಕೋರ್ಟ್ ಪೀಠದಲ್ಲಿ ಕಲಾಪ ಸಮಯ ಬದಲಾವಣೆ

ಬಿಸಿಲ ಧಗೆ: 8 ಜಿಲ್ಲೆಗಳು, ಒಂದು ಹೈಕೋರ್ಟ್ ಪೀಠದಲ್ಲಿ ಕಲಾಪ ಸಮಯ ಬದಲಾವಣೆ

ಬಿಸಿಲ ಧಗೆ: 8 ಜಿಲ್ಲೆಗಳು, ಒಂದು ಹೈಕೋರ್ಟ್ ಪೀಠದಲ್ಲಿ ಕಲಾಪ ಸಮಯ ಬದಲಾವಣೆ





ಬಿಸಿಲ ಬೇಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮತ್ತು ಒಂದು ಹೈಕೋರ್ಟ್ ಪೀಠದಲ್ಲಿ ಕೋರ್ಟ್ ಕಲಾಪದ ಸಮಯ ಬದಲಾವಣೆ ಮಾಡಲಾಗಿದೆ.


ಈ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಪ್ರಕಟಣೆ ಹೊರಡಿಸಿದ್ದಾರೆ.


ಕೋರ್ಟ್‌ ಕಲಾಪವು ಏಪ್ರಿಲ್ 3ರಿಂದ ಮೇ 31ರ ವರೆಗೆ ಈ ಹೊಸ ಸಮಯ ಬದಲಾವಣೆಯ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಹೈಕೋರ್ಟ್ ಪ್ರಕಟಣೆ ಮಾಹಿತಿ ನೀಡಿದೆ.


ಕಲಾಪ ವೇಳೆಯಲ್ಲಿ ಬದಲಾವಣೆಗೆ ಒಳಪಟ್ಟ ಜಿಲ್ಲೆಗಳ ವಿವರ:

ಕಲಬುರ್ಗಿ,

ಬೀದರ್,

ಯಾದಗಿರಿ,

ಕೊಪ್ಪಳ

ರಾಯಚೂರು

ಬಳ್ಳಾರಿ

ಬಾಗಲಕೋಟೆ

ವಿಜಯಪುರ


ಹಾಗೂ ಹೈಕೋರ್ಟ್‌ನ ಕಲಬುರ್ಗಿ ಪೀಠ


ಕಲಾಪದ ಸಮಯ: 

ಈ ಮೇಲಿನ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಮತ್ತು ಹೈಕೋರ್ಟ್‌ ಪೀಠದಲ್ಲಿ ಬೆಳಿಗ್ಗೆ ಎಂಟು ಗಂಟಗೆ ಕಲಾಪ ಆರಂಭವಾಗಲಿದ್ದು, ಏರುಹೊತ್ತು 11 ಗಂಟೆಯ ವರೆಗೆ ಕಲಾಪ ನಡೆಯಲಿದೆ.

ಅರ್ಧ ತಾಸು ವಿರಾಮದ ಬಳಿಕ 11-30ರಿಂದ ಮಧ್ಯಾಹ್ನ 1-30ರ ವರೆಗೆ ಕಲಾಪ ನಡೆಯಲಿದೆ.


ಈ ನ್ಯಾಯಾಲಯಗಳ ಕಚೇರಿ ಸಮಯದಲ್ಲಿ ಬದಲಾವಣೆ ಆಗಿದ್ದು, ಬೆಳಿಗ್ಗೆ 7-30ರಿಂದ ಮಧ್ಯಾಹ್ನ 2-00 ಗಂಟೆಯ ವರೆಗೆ ಇರಲಿದೆ. ಶನಿವಾರ 7-30ರಿಂದ 11-30ರ ವರೆಗೆ ಇರಲಿದೆ.


ಸಿವಿಲ್,ಕ್ರಿಮಿನಲ್, ಕೌಟುಂಬಿಕ ಹಾಗೂ ಕಾರ್ಮಿಕ ನ್ಯಾಯಾಲಯಗಳಲ್ಲಿನ ಕಲಾಪದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಏಪ್ರಿಲ್ 26 ಮತ್ತು ಮೇ 24ರ ದಿನದಂದು ಕಲಾಪವು ಬೆಳಿಗ್ಗೆ 7-30ರಿಂದ ಮಧ್ಯಾಹ್ನ 2-00 ಗಂಟೆಯ ವರೆಗೆ ಇರಲಿದೆ

Ads on article

Advertise in articles 1

advertising articles 2

Advertise under the article