
2 ವರ್ಷಗಳಿಂದ ಜೈಲಿನಲ್ಲಿದ್ದ ಪತಿಗೆ ಶಾಕ್: ಕೊಲೆಯಾದ ಪತ್ನಿ 5 ವರ್ಷಗಳ ಬಳಿಕ ಎದ್ದು ಬಂದಳು!
2 ವರ್ಷಗಳಿಂದ ಜೈಲಿನಲ್ಲಿದ್ದ ಪತಿಗೆ ಶಾಕ್: ಕೊಲೆಯಾದ ಪತ್ನಿ 5 ವರ್ಷಗಳ ಬಳಿಕ ಎದ್ದು ಬಂದಳು!
ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿದ್ದು ನ್ಯಾಯಕ್ಕಾಗಿ ಹೋರಾಡುತ್ತಿದ್ದ ಪತಿಗೆ ಶಾಕ್. ಕೊಲೆಯಾಗಿದ್ದಾರೆ ಎಂದು ಆರೋಪಿಸಲಾಗಿದ್ದ ತನ್ನ ಪತ್ನಿ 5 ವರ್ಷಗಳ ಬಳಿಕ ಎದ್ದು ಬಂದಳು!.
ನಾನು ಸತ್ತಿಲ್ಲ. ಬದುಕಿದ್ದೇನೆ ಎಂದು ಮೃತಳೆಂದು ಘೋಷಿಸಲಾಗಿದ್ದ ವ್ಯಕ್ತಿ ನ್ಯಾಯಾಲಯದ ಮುಂದೆ ಹಾಜರಾಗಿ ಅಚ್ಚರಿ ಮತ್ತು ಆಘಾತ ಮೂಡಿಸಿದ್ದಳೆ.
ಈ ಕೊಡಗಿನ ಕುಶಾಲನಗರದಲ್ಲಿ ನಡೆದಿದೆ. ಪತಿ ಸುರೇಶ್ ಎಂಬಾತ ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಫದಲ್ಲಿ ಎರಡು ವರ್ಷಗಳಿಂದ ಜೈಲಿನಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದ.
ಐದು ವರ್ಷಗಳ ಬಳಿಕ ತನ್ನ ಪತ್ನಿ ಹೊಟೇಲೊಂದರಲ್ಲಿ ಕಾಫಿ ಕುಡಿಯುತ್ತಿರುವ ವಿಚಾರ ಗೊತ್ತಾಗಿ ಗರಬಡಿದಂತಾಗಿದೆ.
ಘಟನೆಯ ವಿವರ
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನವೆಂಬರ್ 2020ರಲ್ಲಿ ನಾಪತ್ತೆ ಪ್ರಕರಣವೊಂದು ದಾಖಲಾಗಿತ್ತು. ಕುಶಾಲನಗರ ತಾಲೂಕಿನ ಬಸವನಹಳ್ಳಿಯ ಆದಿವಾಸಿ ಜನಾಂಗದ ಸುರೇಶ್ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು.
ಸುರೇಶ್ ಮತ್ತು ಮಲ್ಲಿಗೆಯ ವಿವಾಹವಾಗಿ ಅವರಿಗೆ ಎರಡು ಮಕ್ಕಳಿದ್ದರು. ಇದ್ದಕ್ಕಿದ್ದಂತೆ ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ಸುರೇಶ್ ದೂರು ನೀಡಿದ್ದರು. ಆಕೆಗೆ ಬೇರೊಬ್ಬನ ಜತೆಗೆ ಅಕ್ರಮ ಸಂಬಂಧ ಇದ್ದು, ಇಬ್ಬರೂ ಓಡಿ ಹೋಗಿದ್ದಾರೆ ಎಂಬ ಮಾಹಿತಿಯೂ ಸುರೇಶ್ ಗೆ ತಿಳಿದಿತ್ತು.
ಇತ್ತ ಸುರೇಶ್ ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು ಕೆಲ ದಿನಗಳ ಕಾಲ ಹುಡುಕಾಟ ನಡೆಸುವ ಪ್ರಯತ್ನ ಮಾಡಿ ಬಳಿಕ ಪ್ರಯತ್ನವನ್ನೇ ಕೈ ಬಿಟ್ಟಿದ್ದರು.
2021ರಲ್ಲಿ ಕುಶಾಲನಗರಕ್ಕೆ ಬಂದ ಪಿರಿಯಾಪಟ್ಟಣದ ಪೊಲೀಸರು ಮಹಿಳೆಯೊಬ್ಬರ ಮೃತದೇಹದ ಗುರುತು ಪತ್ತೆ ಮಾಡಬೇಕಿದೆ ಎಂದು ಹೇಳಿ ಸುರೇಶ್‌ನನ್ನು ಬೆಟ್ಟದಪುರಕ್ಕೆ ಕರೆದೊಯ್ದರು.
ಅಲ್ಲಿ ಮಹಿಳೆಯೊಬ್ಬರ ಬಟ್ಟೆ, ಒಳ ಉಡುಪಿ, ಚಪ್ಪಲಿ ತೋರಿಸಿ ಕಾಣೆಯಾಗಿರುವ ಮಲ್ಲಿಗೆಯದ್ದೇ ಎಂದು ಹೇಳಿ, ಸುರೇಶ್‌ನನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದರು. ಮಲ್ಲಿಗೆ ತಾಯಿಯಿಂದ ದೂರು ಬರೆಸಿಕೊಂಡು ಸುರೇಶ್‌ನನ್ನು ಜೈಲಿಗೆ ಕಳುಹಿಸಿದರು.
ತನ್ನ ಪತ್ನಿ ಯಾರದ್ದೋ ಜೊತೆಗೆ ಓಡಿ ಹೋಗಿದ್ದಾಳೆ ಎಂದು ಗೊತ್ತಿದ್ದರೂ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಸುರೇಶ್‌ನ ಜಾಮೀನು ಅರ್ಜಿಯೂ ವಜಾಗೊಂಡು ಎರಡು ವರ್ಷ ಜೈಲಿನಲ್ಲಿ ಇರುವಂತಾಗಿತ್ತು.
ಮಕ್ಕಳೂ ತಾಯಿ ಸತ್ತಿಲ್ಲ ಎಂದು ಹೇಳಿದ್ದರೂ ಯಾವುದೇ ಪ್ರಯೋಜನವಿರಲಿಲ್ಲ. ದೂರು ದಾಖಲಿಸಿರುವ ಸುರೇಶ್‌ನ ಅತ್ತೆಗೆ ತನ್ನ ಮಗಳು ಸತ್ತಿದ್ದಾಳೆ ಎಂಬ ನಂಬಿಕೆಯೂ ಇರಲಿಲ್ಲ. ಈ ಮಧ್ಯೆ, ಮೈಸೂರಿನ ವಕೀಲರಾದ ಪಾಂಡು ಪೂಜಾರಿ ಪ್ರಕರಣವನ್ನು ಕೈಗೆತ್ತಿಕೊಂಡು ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.