-->
ರಾಜ್ಯಪಾಲರಿಗೆ ಶಾಸನ ಬಾಕಿ ಉಳಿಸಿಕೊಳ್ಳುವ ಪರಮಾಧಿಕಾರ ಇಲ್ಲ; ಕಾಲಮಿತಿಯಲ್ಲಿ ಅಂಕಿತ ಅವರ ಕರ್ತವ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ರಾಜ್ಯಪಾಲರಿಗೆ ಶಾಸನ ಬಾಕಿ ಉಳಿಸಿಕೊಳ್ಳುವ ಪರಮಾಧಿಕಾರ ಇಲ್ಲ; ಕಾಲಮಿತಿಯಲ್ಲಿ ಅಂಕಿತ ಅವರ ಕರ್ತವ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ರಾಜ್ಯಪಾಲರಿಗೆ ಶಾಸನ ಬಾಕಿ ಉಳಿಸಿಕೊಳ್ಳುವ ಪರಮಾಧಿಕಾರ ಇಲ್ಲ; ಕಾಲಮಿತಿಯಲ್ಲಿ ಅಂಕಿತ ಅವರ ಕರ್ತವ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಶಾಸನ ಸಭೆ ಅಂಗೀಕರಿಸಿದ ವಿಧೇಯಕಗಳು, ಕಾನೂನುಗಳನ್ನು ರಾಜ್ಯಪಾಲರು ತಮ್ಮಲ್ಲೇ ಬಾಕಿ ಉಳಿಸಿಕೊಳ್ಳುವ ಪರಮಾಧಿಕಾರ ಇಲ್ಲ. ಕಾಲಮಿತಿಯಲ್ಲಿ ಅಂಕಿತ ಹಾಕುವುದು ಅವರ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲ, ಆರ್. ಮಹಾದೇವನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಶಾಸನ ಸಭೆ ಅಂಗೀಕರಿಸಿದ ವಿಧೇಯಕಗಳನ್ನು ಸಹಿಯೂ ಹಾಕದೆ, ಹಿಂದಕ್ಕೂ ಕಳಿಸದೆ ತಮ್ಮಲ್ಲೇ ಬಾಕಿ ಉಳಿಸಿಕೊಳ್ಳುವುದಕ್ಕೆ ರಾಜ್ಯಪಾಲರಿಗೆ ಪರಮಾಧಿಕಾರ ಇಲ್ಲ. ಸಂವಿಧಾನಬದ್ಧವಾಗಿ ಕಾಲಮಿತಿಯೊಳಗೆ ಅಂಕಿತ ಹಾಕುವುದು ಅವರ ಕರ್ತವ್ಯ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ತಮಿಳುನಾಡು ವಿಧಾನಸಭೆ ಅಂಗೀಕರಿಸಿದ 10 ವಿಧೇಯಕಗಳಿಗೆ ಸಹಿ ಹಾಕದೆ ರಾಜ್ಯಪಾಲ ಆರ್.ಎನ್. ರವಿ ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಸಿದ್ದರು. ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.


ಸಕಾರಣವಿಲ್ಲದೆ ಕಾನೂನು ತಡೆ ಹಿಡಿಯುವುದು ಕಾನೂನುಬಾಹಿರ. ಕುಂಟುನೆಪ ಹೇಳಿಕೊಂಡು ರಾಷ್ಟ್ರಪತಿಗಳ ಅಂಗಳಕ್ಕೆ ವಿಧೇಯಕಗಳನ್ನು ರವಾನಿಸುವುದು ಸಂವಿಧಾನಿಕ ನಿಬಂಧನೆಗಳ ಉಲ್ಲಂಘನೆ ಎಂದು ಸ್ಪಷ್ಟ ಶಬ್ಧಗಳಲ್ಲಿ ನ್ಯಾಯಪೀಠ ಹೇಳಿದೆ.


ವಿಧೇಯಕ ಅಂಗೀಕರಿಸಿದ ಸುಪ್ರೀಂ ಕೋರ್ಟ್‌!

ತಮಿಳುನಾಡು ರಾಜ್ಯಪಾಲ ಅಕ್ರಮವಾಗಿ ತಡೆ ಹಿಡಿದಿದ್ದ 10 ವಿಧೇಯಕಗಳಿಗೆ ಸಂವಿಧಾನದ 142ರ ವಿಧಿಯಡಿ ಪರಮಾಧಿಕಾರ ಬಳಸಿ ಸುಪ್ರೀಂಕೋರ್ಟ್ ಅಂಗೀಕಾರ ನೀಡಿತು.


ಕಾನೂನಾತ್ಮಕ ಬಿಕ್ಕಟ್ಟು ಯಾ ಸಂಘರ್ಷ ತಪ್ಪಿಸಲು ಸಾಂದರ್ಭಿಕವಾಗಿ ಸಂವಿಧಾನದ ಕಲಂ 142ನೇ ವಿಧಿಯನ್ನು ಬಳಸಿಕೊಳ್ಳಬಹುದು. ಇದನ್ನೇ ಪುನರುಚ್ಚರಿಸಿದ ನ್ಯಾಯಪೀಠ, ತಮಿಳುನಾಡಿನ ವಿಚಾರದಲ್ಲೂ ಪರಮಾಧಿಕಾರ ಬಳಸಿ ಬಾಕಿ ಇದ್ದ ವಿಧೇಯಕಗಳನ್ನು ಅಂಗೀಕರಿಸಲಾಗಿದೆ ಎಂದು ಘೋಷಣೆ ಮಾಡಿದೆ.


ಸುಪ್ರೀಂ ಕೋರ್ಟ್‌ನ ಈ ತೀರ್ಪು ಇತರ ರಾಜ್ಯಗಳ ರಾಜ್ಯಪಾಲರಿಗೂ ಎಚ್ಚರಿಕೆಯ ಕರೆಗಂಟೆಯಾಗಿದೆ. ಕರ್ನಾಟಕದಲ್ಲಿ ಹಲವು ವಿಧೇಯಕಗಳಿಗೆ ರಾಜ್ಯಪಾಲರು ಸಹಿ ಹಾಕದೆ ಬಾಕಿ ಉಳಿಸಿಕೊಂಡಿದ್ದಾರೆ. ನ್ಯಾಯಾಂಗದ ತೀರ್ಪು ಅವರಿಗೂ ಬಿಸಿ ಮುಟ್ಟಿಸಬಹುದು.

ಜೊತೆಗೆ ಈ ಮಹತ್ವದ ತೀರ್ಪು ಕರ್ನಾಟಕ ಸರ್ಕಾರದ ಕಾನೂನಾತ್ಮಕ ಹೋರಾಟಕ್ಕೆ ಭೀಮ ಬಲ ನೀಡಿದ್ದಂತೂ ಸತ್ಯ.



Ads on article

Advertise in articles 1

advertising articles 2

Advertise under the article