
ಚೆಕ್ ಅಮಾನ್ಯ ಪ್ರಕರಣ: ಜಂಟಿ ಫಿರ್ಯಾದು ಊರ್ಜಿತವಲ್ಲ; ಆದರೆ, ದೋಷ ಸರಿಪಡಿಸಬಹುದು
ಚೆಕ್ ಅಮಾನ್ಯ ಪ್ರಕರಣ: ಜಂಟಿ ಫಿರ್ಯಾದು ಊರ್ಜಿತವಲ್ಲ; ಆದರೆ, ದೋಷ ಸರಿಪಡಿಸಬಹುದು
ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಖಾತೆ ಹೊಂದಿರುವ ಖಾತೆಯ ಮೂಲಕ ಚೆಕ್ ಅಮಾನ್ಯಗೊಂಡಿದ್ದರೆ, ಆಗ ಆ ಖಾತೆದಾರರು ಜಂಟಿಯಾಗಿ ಪ್ರಕರಣ ದಾಖಲಿಸಿದರೆ ಅಂತಹ ಫಿರ್ಯಾದು ನೆಗೋಷಿಯೆಬಲ್ಸ್ ಇನ್ಸ್‌ಟ್ರುಮೆಂಟ್ಸ್ ಆಕ್ಟ್ ಪ್ರಕಾರ ಊರ್ಜಿತವಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಜಂಟಿ ಫಿರ್ಯಾದು ಕಾನೂನಿನ ಅಡಿಯಲ್ಲಿ ಊರ್ಜಿತವಲ್ಲ. ಆದರೆ, ಇಂತಹ ಫಿರ್ಯಾದಿನಲ್ಲಿ ಇರುವ ದೋಷ ಸರಿಪಡಿಸಬಹುದು ಎಂದು ತೀರ್ಪು ಹೇಳಿದೆ. ಇಬ್ಬರು ಫಿರ್ಯಾದುದಾರರ ಪೈಕಿ ಒಬ್ಬರು ತಮ್ಮ ದೂರನ್ನು ಹಿಂದಕ್ಕೆ ಪಡೆದಲ್ಲಿ ಆ ದೋಷವನ್ನು ಸರಿಪಡಿಸಬಹುದಾಗಿದೆ ಎಂದು ನ್ಯಾಯಮೂರ್ತಿ ಸಂದೇಶ್ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
joint complaint under sec 138 is not maintainable, under sec. 138 of NI act. but if the one complainant withdraw his claim, the defect is curable- Karnataka High Court