
MVC Case: ಅಪಘಾತ ಪ್ರಕರಣಗಳ ಪರಿಹಾರ ಹಕ್ಕುದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ: ವಿಚಾರಣಾ ನ್ಯಾಯಾಲಯಗಳಿಗೆ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರ್ದೇಶನ
MVC Case: ಅಪಘಾತ ಪ್ರಕರಣಗಳ ಪರಿಹಾರ ಹಕ್ಕುದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ: ವಿಚಾರಣಾ ನ್ಯಾಯಾಲಯಗಳಿಗೆ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರ್ದೇಶನ
ಮೋಟಾರು ಅಪಘಾತ ಪ್ರಕರಣದಲ್ಲಿ ಪರಿಹಾರ ನೀಡುವಲ್ಲಿ ಆಗುವ ವಿಳಂಬವನ್ನು ತಪ್ಪಿಸಲು ಮತ್ತು ಅಪಘಾತದ ಪರಿಹಾರದ ವಿತರಣೆಯನ್ನು ಸುಲಭಗೊಳಿಸಲು ನ್ಯಾಯಾಲಯಗಳು ವಿಮಾ ಕಂಪೆನಿಗಳಿಗೆ ಪರಿಹಾರವನ್ನು ನೇರವಾಗಿ ಹಕ್ಕುದಾರರನ ಬ್ಯಾಂಕ್ ಖಾತೆಗೆ ವರ್ಗಾಯಿಸಲು ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೆ.ಕೆ. ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ರಾಜೇಂದ್ರ ಬಿಂದಲ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಪರಮಿಂದರ್ ಸಿಂಗ್ Vs ಹನಿ ಗೋಯಲ್ ಪ್ರಕರಣದಲ್ಲಿ ದಿನಾಂಕ 18-03-2025ರಂದು ಈ ತೀರ್ಪು ಹೊರಬಿದ್ದಿದೆ.
ಕ್ಲೇಮುದಾರರಿಗೆ ಹಣ ಸಂದಾಯ ಮಾಡುವ ಪ್ರಕ್ರಿಯೆ ವಿಳಂಬವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟಲು ವಿಮಾ ಕಂಪೆನಿಗಳು ಕ್ಲೇಮುದಾರರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗವಣೆ ಮಾಡಲು ನಿರ್ದೇಶನ ನೀಡಬೇಕಿದೆ ಎಂಬ ಅಂಶವನ್ನು ನ್ಯಾಯಾಲಯ ಒತ್ತಿ ಹೇಳಿದೆ.
ಕ್ಲೇಮುದಾರರಿಂದ ಸೂಕ್ತ ದಾಖಲೆಯನ್ನು ಪಡೆದು ಸಮರ್ಪಕ ಪರಿಶೀಲನೆ ಬಳಿಕ ವಿಮಾ ಕಂಪೆನಿ ಯಾ ಇತರ ಹೊಣೆಗಾರರು ಯಾ ಬಾಧ್ಯಸ್ಥರು ಹಣ ವರ್ಗಾವಣೆ ಮಾಡಬೇಕು. ಈ ನಿಟ್ಟಿನಲ್ಲಿ ವಿಚಾರಣಾ ನ್ಯಾಯಾಲಯಗಳು ಸೂಕ್ತ ಆದೇಶ ಹೊರಡಿಸಬೇಕಾಗಿದೆ ಎಂದು ತೀರ್ಪಿನಲ್ಲಿ ಹೇಳಿದೆ.
ಈ ಆದೇಶದ ಪ್ರತಿಯನ್ನು ದೇಶದ ಎಲ್ಲ ರಾಜ್ಯಗಳ ಹೈಕೋರ್ಟ್ ರಿಜಿಸ್ಟ್ರಿಗಳಿಗೆ ಕಳುಹಿಸುವಂತೆ ನ್ಯಾಯಪೀಠ ಸೂಚಿಸಿದೆ.
ಪ್ರಕರಣ: ಪರಮಿಂದರ್ ಸಿಂಗ್ Vs ಹನಿ ಗೋಯಲ್, ಸುಪ್ರೀಂ ಕೋರ್ಟ್ SLP (C) 4484/2020 Dated 18-03-2025