.jpg)
ನೂತನ ಸಿಜೆಐ ಆಗಿ ಬಿ.ಆರ್. ಗವಾಯಿ: ಮೇ 14ರಂದು ಅಧಿಕಾರ ಸ್ವೀಕಾರ ಸಾಧ್ಯತೆ
Wednesday, April 16, 2025
ನೂತನ ಸಿಜೆಐ ಆಗಿ ಬಿ.ಆರ್. ಗವಾಯಿ: ಮೇ 14ರಂದು ಅಧಿಕಾರ ಸ್ವೀಕಾರ ಸಾಧ್ಯತೆ
ಪ್ರಸಕ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಯ್ ಖನ್ನಾ ಅವರು ಮೇ 13ರಂದು ನಿವೃತ್ತರಾಗಲಿದ್ದಾರೆ. ಈ ಸ್ಥಾನಕ್ಕೆ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಸಿಜೆಐ ಸ್ಥಾನಕ್ಕೆ ಖನ್ನಾ ಶಿಫಾರಸ್ಸು ಮಾಡಿದ್ದಾರೆ.
ಹಿರಿತನದ ಆಧಾರದಲ್ಲಿ ಸಿಜೆಐ ಸ್ಥಾನಕ್ಕೆ ಗವಾಯಿ ಅವರನ್ನು ಶಿಫಾರಸ್ಸು ಮಾಡಲಾಗಿದೆ. ಸಿಜೆಐ ಗವಾಯಿ ಅಧಿಕಾರಾವಧಿ ಆರು ತಿಂಗಳು ಇರಲಿದೆ. 2025ರ ನವೆಂಬರ್‌ನಲ್ಲಿ ಅವರು ನಿವೃತ್ತರಾಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ನೂತನ ಸಿಜೆಐ ಆಗಿ ಬಿ.ಆರ್. ಗವಾಯಿ ಮೇ 14ರಂದು ಅಧಿಕಾರ ಸ್ವೀಕಾರ ಸಾಧ್ಯತೆ ಇದೆ.
2019ರ ಮೇ 24ರಂದು ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ನ್ಯಾ. ಬಿ.ಆರ್. ಗವಾಯಿ ಅವರು ಮಹಾರಾಷ್ಟ್ರದ ವಿದರ್ಭಾ ಪ್ರಾಂತ್ಯದ ಅಮರಾವತಿ ಜಿಲ್ಲೆಯವರು.