
ಸತತ 5 ದಿನ ರಜೆಯ ಆಸೆಗೆ ಬಿತ್ತು ತಣ್ಣೀರು: ವಕೀಲರ ಮನವಿ ತಿರಸ್ಕರಿಸಿದ ಹೈಕೋರ್ಟ್
ಸತತ 5 ದಿನ ರಜೆಯ ಆಸೆಗೆ ಬಿತ್ತು ತಣ್ಣೀರು: ವಕೀಲರ ಮನವಿ ತಿರಸ್ಕರಿಸಿದ ಹೈಕೋರ್ಟ್
ಗುರುವಾರ (10-04-2025)ರಿಂದ ಸತತ 5 ದಿನ ರಜೆ ದೊರೆಯಬಹುದು ಎಂಬ ವಕೀಲರ ಆಸೆಗೆ ತಣ್ಣೀರು ಬಿದಿದ್ದೆ. ಶುಕ್ರವಾರ ರಾಜ್ಯದ ನ್ಯಾಯಾಲಯಗಳಿಗೆ ರಜೆ ಘೋಷಿಸಬೇಕು ಎಂಬ ವಕೀಲರ ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಇದರಿಂದ ಶುಕ್ರವಾರ (11-04-2025) ಕೋರ್ಟ್ ಕಲಾಪಗಳು ಎಂದಿನಂತೆ ನಡೆಯಲಿದೆ.
ಶನಿವಾರ ಎರಡನೇ ಶನಿವಾರದ ರಜೆ ಇದ್ದು, ಸೋಮವಾರ ಅಂಬೇಡ್ಕರ್ ಜಯಂತಿ ಪ್ರಯುಕ್ತ ರಜೆ ಇತ್ತು. ಗುರುವಾರ ಮಹಾವೀರ ಜಯಂತಿ ಪ್ರಯುಕ್ತ ರಜೆ ಇದ್ದ ಕಾರಣ ಗುರುವಾರದಿಂದ ಸೋಮವಾರದ ವರೆಗೆ ನಿರಂತರ ಐದು ದಿನದ ರಜೆಗೆ ಶುಕ್ರವಾರ ಅಡ್ಡಿಯಾಗುತ್ತಿತ್ತು.
ಶುಕ್ರವಾರವನ್ನೂ ರಜೆ ಎಂದು ಘೋಷಿಸಿ ಎಂದು ವಕೀಲರ ಸಂಘಗಳು ಮನವಿ ಮಾಡಿತ್ತು. ಈ ರಜೆಯನ್ನು ಈ ತಿಂಗಳ ನಾಲ್ಕನೇ ಶನಿವಾರಕ್ಕೆ ಅಡ್ಜೆಸ್ಟ್ ಮಾಡಬಹುದು ಎಂದು ಮನವಿಯಲ್ಲಿ ಕೋರಲಾಗಿತ್ತು. ಆದರೆ, ಕರ್ನಾಟಕ ಹೈಕೋರ್ಟ್ ವಕೀಲರ ಮನವಿಯನ್ನು ತಿರಸ್ಕರಿಸಿದ್ದು, ಶುಕ್ರವಾರದ ಕಲಾಪಗಳು ಎಂದಿನಂತೆ ನಡೆಯಲಿದೆ.