
ಕಸ ಗುಡಿಸುವವರಿಗೆ "ಜಾಡಮಾಲಿ" ಪದ ಬಳಕೆ ನಿಷೇಧ: ಕರ್ನಾಟಕ ಹೈಕೋರ್ಟ್ ಆದೇಶ
ಕಸ ಗುಡಿಸುವವರಿಗೆ "ಜಾಡಮಾಲಿ" ಪದ ಬಳಕೆ ನಿಷೇಧ: ಕರ್ನಾಟಕ ಹೈಕೋರ್ಟ್ ಆದೇಶ
ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಇನ್ನು ಮುಂದೆ ಯಾವುದೇ ಕಡತ ಯಾ ದಾಖಲೆಗಳಲ್ಲಿ ಸ್ವೀಪರ್, ಕಸ ಗುಡಿಸುವವರಿಗೆ ಜಾಡಮಾಲಿ ಎಂಬ ಪದ ಬಳಸುವಂತಿಲ್ಲ.
ಕಸ ಗುಡಿಸುವವರಿಗೆ "ಜಾಡಮಾಲಿ" ಎಂದು ಸಂಬೋಧಿಸುವುದನ್ನು ಮತ್ತು ಆ ಪದ ಬಳಕೆ ಮಾಡುವುದನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ರಾಮಚಂದ್ರ ಹುದ್ದಾರ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ತಮ್ಮ ಸೇವೆ ಖಾಯಂಗೊಳಿಸಬೇಕು ಎಂದು ಕೋರಿ ತುಮಕೂರು ಜಿಲ್ಲಾ ಮೀಸಲು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ ಬಾಬು ಸೇರಿ ರಾಜ್ಯದ ವಿವಿಧ ಕಡೆಯ 31 ಠಾಣೆಯ ಸ್ವೀಪರ್ ಪೊಲೀಸ್ ವರ್ಗದ ಸಿಬ್ಬಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಪೀಠ ಈ ತೀರ್ಪು ನೀಡಿದೆ.
ಸರ್ಕಾರ ಜಾಡಮಾಲಿ ಪದ ಬಳಸುತ್ತಿರುವುದು ಸರಿಯಲ್ಲ. ಆದ್ದರಿಂದ ಅದಕ್ಕೆ ಪರ್ಯಾಯವಾಗಿ ಸ್ವಚ್ಚತಾ ಕಾರ್ಮಿಕ ಎಂಬುದನ್ನು ಬಳಸುವಂತೆ ನ್ಯಾಯಪೀಠಕ್ಕೆ ಹೆಚ್ಚುವರಿ ಅಡ್ವಕೇಟ್ ಜನರಲ್ ಅಹ್ಮದ್ ಅವರು ಕೋರಿಕೊಂಡಿದ್ದರು.